ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೂರಿಯಂತೆಯೇ ಕಾಣುವ ಪತ್ತರಿ ರೆಸಿಪಿ ಬಗ್ಗೆ ಕೇಳಿದ್ದೀರಾ ? ಇಲ್ಲಾಂದ್ರೆ ಈಗಲೇ ಓದಿ ತಿಳಿಯಿರಿ.
ಬೇಕಾಗುವ ಸಾಮಗ್ರಿಗಳು:
ಕುಚಲಕ್ಕಿ
ಬೆಳ್ತಕ್ಕಿ
ಈರುಳ್ಳಿ
ಅನ್ನ
ಸೋಂಪು
ಉಪ್ಪು
ಎಣ್ಣೆ
ಮಾಡುವ ವಿಧಾನ:
* ಅಕ್ಕಿಯನ್ನು ಎಂಟು ಗಂಟೆಗಳ ಕಾಲ ನೆನೆ ಹಾಕಿ, ನೀರು ಸೋಸಿ.
* ಈಗ ಅಕ್ಕಿಯನ್ನು ಮಿಕ್ಸಿಯಲ್ಲಿ ರುಬ್ಬಿ.
* ನಂತರ ಈರುಳ್ಳಿ ಅನ್ನ ರುಬ್ಬಿ.
* ಈಗ ರುಬ್ಬಿದ ಅಕ್ಕಿ ಪುಡಿಗೆ ರುಬ್ಬಿದ ಈರುಳ್ಳಿ-ಅನ್ನದ ಮಿಶ್ರಣ ಹಾಕಿ. ಅದಕ್ಕೆ ಉಪ್ಪು, ಸೋಂಪು ಸೇರಿಸಿ ಕಲಸಿ ಅರ್ಧ ಗಂಟೆ ಹಾಗೆ ಇಡಿ.
* ಈಗ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.
* ಎಣ್ಣೆ ಕುದಿಯುವಾಗ ಮಿಶ್ರಣ ಸ್ವಲ್ಪ-ಸ್ವಲ್ಪ ತೆಗೆದು ಉಂಡೆ ಕಟ್ಟಿ, ಪ್ಲಾಸ್ಟಿಕ್‌ಗೆ ಎಣ್ಣೆ ಸವರಿ ತಟ್ಟಿ ಎಣ್ಣೆಯಲ್ಲಿ ಬಿಡಿ. ಅದನ್ನು ಚೆನ್ನಾಗಿ ಬೇಯಿರಿ.
ಈಗ ಬಿಸಿ ಬಿಸಿಯಾದ ಪತ್ತರಿ ಸವಿಯಲು ಸಿದ್ಧ.