Sunday, October 1, 2023

Latest Posts

ಹೈದರಾಬಾದ್‌ಗಿಂತ ಬೆಂಗಳೂರು ದುಬಾರಿ ನಗರವಾ? ವೈರಲ್‌ ಆಗ್ತಿದೆ ವ್ಯಕ್ತಿ ಮಾಡಿರುವ ಪೋಸ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರು ಜೀವನ ಅತ್ಯಂತ ದುಬಾರಿ ಎಂಬ ಪೋಸ್ಟ್ಗಳು ಸದ್ಯ ಸುದ್ದಿಯಲ್ಲಿವೆ. ಇತ್ತೀಚೆಗಷ್ಟೇ ಬೆಂಗಳೂರಿನಿಂದ ಹೈದರಾಬಾದ್‌ಗೆ ಶಿಫ್ಟ್‌ ಆದ ವ್ಯಕ್ತಿಯೊಬ್ಬ ಎರಡೂ ನಗರಗಳಿಗೆ ಹೋಲಿಕೆ ಮಾಡಿ, ಬೆಂಗಳೂರಿಗಿಂತ ಹೈದರಾಬಾದ್‌ನಲ್ಲಿ ಜೀವನ ಬಹಳ ಸುಲಭದಾಯಕವಾಗಿದೆ ಎಂಬ ಅಭಿಪ್ರಾಯವನ್ನು ಹಂಚಿಕೊಂಡರು. ಪೃಧ್ವಿ ರೆಡ್ಡಿ ಮಾಡಿರುವ ಪೋಸ್ಟ್ ಇದೀಗ ಚರ್ಚೆಗೆ ಕಾರಣವಾಗಿದೆ.

ಟ್ವಿಟರ್ ಬಳಕೆದಾರ ಪೃಧ್ವಿ ರೆಡ್ಡಿ (@prudhvir3ddy) ಎಂಬುವವರು ತಮ್ಮ ಕುಟುಂಬವನ್ನು ಬೆಂಗಳೂರಿನಿಂದ ಹೈದರಾಬಾದ್‌ಗೆ ಸ್ಥಳಾಂತರಿಸುವ ಮೂಲಕ ತಿಂಗಳಿಗೆ 40,000 ರೂಪಾಯಿಗಳನ್ನು ಉಳಿಸುತ್ತಿರುವುದಾಗಿ ಬರೆದುಕೊಂಡಿದ್ದಾರೆ. ಆ ಹಣದಿಂದ ಒಂದು ಕುಟುಂಬ ನೆಮ್ಮದಿಯಿಂದ ಬದುಕಬಹುದು ಎಂಬ ಅವರ ಮಾತು ನೆಟ್ಟಿಗರ ಗಮನ ಸೆಳೆದಿದೆ. ಈ ವಿಚಾರಕ್ಕೆ ಕೆಲವರು ನಿಜ ಎಂದರೆ, ಇನ್ನೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮನೆ ಬಾಡಿಗೆ, ಸಾರಿಗೆ ವೆಚ್ಚ, ದಿನನಿತ್ಯದ ಖರ್ಚು ವೆಚ್ಚ ಎಲ್ಲವೂ ದುಬಾರಿ ಎಂದು ಕೆಲವರು ಕಮೆಂಟ್‌ ಮಾಡಿದ್ದರೆ, ಇನ್ನೂ ಕೆಲವರು ಬೆಂಗಳೂರು ದಿ ಬೆಸ್ಟ್‌ ಎಂದಿದ್ದಾರೆ. ಎರಡೂ ನಗರಗಳಲ್ಲಿ ಆಯಾ ಪ್ರದೇಶಕ್ಕೆ ತಕ್ಕಂತೆ ಮನೆ ಬಾಡಿಗೆ ಇವೆ, ಬೆಂಗಳೂರಿನಲ್ಲಿ ಅಗ್ಗದ ಮನೆ ಬಾಡಿಗೆ ದೊರೆಯುತ್ತವೆ. ಹಾಗಂತ ಇದು ದುಬಾರಿ ಎನ್ನಲು ಸಾಧ್ಯವಿಲ್ಲ ಎಂಬಂತಹ ಚರ್ಚೆಗಳು ಮುನ್ನೆಲೆಗೆ ಬರುತ್ತಿವೆ. ಇನ್ನೂ ಸಾರಿಗೆ ವಿಚಾರಕ್ಕೆ ಬಂದರೆ ಬೆಂಗಳೂರಿನಲ್ಲಿ ಅಗ್ಗದ ಸಾರಿಗೆ ಸಾಮಾನ್ಯ ಜನರ ಕೈಗೆಟುಕುವ ಬೆಲೆಯಲ್ಲಿವೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!