ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಪ್ಪಿಟ್ಟು ಎಂದರೆ ಅನೇಕರಿಗೆ ಇಷ್ಟವಾಗುವುದಿಲ್ಲ. ಹಾಗಾಗಿ ಉಪ್ಪಿಟ್ಟು ತಿಂಡಿ ಬೇಡ ಎನ್ನುವವರು ಒಮ್ಮೆ ಮಾಡಿ ಸವಿದು ನೋಡಿ ರಾಗಿ ಉಪ್ಪಿಟ್ಟು.
ಬೇಕಾಗುವ ಸಾಮಾಗ್ರಿಗಳು
* ರಾಗಿ ಹಿಟ್ಟು
* ಮೊಸರು
* ಈರುಳ್ಳಿ
* ಹಸಿಮೆಣಸು
* ಉಪ್ಪು
* ಉದ್ದಿನ ಬೇಳೆ
* ಕಡ್ಲೆ ಬೇಳೆ
* ಸಾಸಿವೆ
* ಸಕ್ಕರೆ
* ತೆಂಗಿನ ತುರಿ
* ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
* ಮೊದಲಿಗೆ ರಾಗಿ ಹಿಟ್ಟು, ಉಪ್ಪು, ಸಕ್ಕರೆ, ಮೊಸರನ್ನು ಒಂದು ಪಾತ್ರೆಗೆ ಹಾಕಿ ಕಲೆಸಿಕೊಳ್ಳಿ.
* ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿಕೊಳ್ಳಿ. ಇದಕ್ಕೆ ಸಾಸಿವೆ ಹಾಕಿ ಅದು ಸಿಡಿಯುತ್ತಿದ್ದಂತೆ, ಉದ್ದಿನ ಬೇಳೆ, ಕಡ್ಲೆ ಬೇಳೆ ಮತ್ತು ಕರಿಬೇವಿನೆಸಳನ್ನು ಹಾಕಿ.
* ಬೇಳೆಗಳು ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ, ಪಾತ್ರೆಗೆ ಕತ್ತರಿಸಲಾಗಿರುವ ಈರುಳ್ಳಿ ಮತ್ತು ಹಸಿಮೆಣಸನ್ನು ಹಾಕಿ ಹುರಿಯಿರಿ.
* ಈಗ ಮಿಶ್ರ ಮಾಡಿಕೊಂಡಿರುವ ರಾಗಿ ಹಿಟ್ಟನ್ನು ಪಾತ್ರೆಗೆ ಸೇರಿಸಿಕೊಳ್ಳಿ ಮತ್ತು ಮಂದ ಉರಿಯಲ್ಲಿ ಮಿಶ್ರ ಮಾಡಲು ಪ್ರಾರಂಭಿಸಿ.
* ಬಳಿದ ತುರಿದ ಕೊಬ್ಬರಿ ಮತ್ತು ಕೊತ್ತಂಬರಿ ಎಸಳನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
* ಪೂರ್ತಿ ಬೇಯಿಸಿದ ನಂತರ, ಉರಿ ಆರಿಸಿ ರಾಗಿ ಉಪ್ಪಿಟ್ಟು ರೆಸಿಪಿ ಸವಿಯಲು ಸಿದ್ಧ.