ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಿನ ವೇಳೆ ರುಚಿಯಾದ ಮತ್ತು ಸ್ವಾದಿಷ್ಟಮಯ ಆಹಾರ ಸೇವಿಸುವುದು ನಮ್ಮ ಮೊದಲ ಆದ್ಯತೆಯಾಗಿರಬೇಕು. ಹಾಗಾಗಿ ಹೆಚ್ಚು ರುಚಿಕರ ಮತ್ತು ಸ್ವಾದಿಷ್ಟವಾಗಿರುವ ರವಾ ರೊಟ್ಟಿಯನ್ನು ಒಮ್ಮೆ ಟ್ರೈ ಮಾಡಿ ಸವಿದು ನೋಡಿ. ರವಾ ರೊಟ್ಟಿ ಮಾಡಲು ಬೇಕಾಗುವ ಸಾಮಾಗ್ರಿಗಳು ಮತ್ತು ಮಾಡುವ ವಿಧಾನವನ್ನು ಇಲ್ಲಿ ತಿಳಿಯಿರಿ.
ಬೇಕಾಗುವ ಸಾಮಾಗ್ರಿಗಳು
*ರವಾ
*ತೆಂಗಿನ ತುರಿ
*ಶುಂಠಿ
*ಮೆಣಸು
*ಸಕ್ಕರೆ
*ಎಣ್ಣೆ
*ನೀರು
ಮಾಡುವ ವಿಧಾನ
* ಮೊದಲಿಗೆ ನೀರನ್ನು ತೆಗೆದುಕೊಂಡು ಮೇಲೆ ತಿಳಿಸಿರುವ ಎಲ್ಲಾ ಸಾಮಾಗ್ರಿಗಳನ್ನು ಕಲಸಿ ಹಿಟ್ಟನ್ನು ಸಿದ್ಧಪಡಿಸಿಕೊಳ್ಳಿ.
* ಈಗ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ತೆಗೆದುಕೊಂಡು ವೃತ್ತಾಕಾರದ ರೊಟ್ಟಿಗಳನ್ನು ಲಟ್ಟಿಸಿಕೊಳ್ಳಿ. * ಒಲೆ ಮೇಲೆ ತವಾವನ್ನು ಇರಿಸಿ ತವಾ ಕಾದ ಕೂಡಲೇ ರೊಟ್ಟಿಯನ್ನು ಬೇಯಿಸಿ. * ರೊಟ್ಟಿ ಬೆಂದ ಕೂಡಲೇ ಸವಿಯಿರಿ.