FOOD| ಬ್ರೆಡ್ ಇಲ್ಲದೆ ಸ್ಯಾಂಡ್‌ವಿಚ್ ಮಾಡ್ಬೋದಾ? ಅದ್ಹೇಗೆ ಎಂದು ಇಲ್ಲಿ ತಿಳಿಯಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬ್ರೆಡ್‌ ಇಲ್ಲದೆ ಸ್ಯಾಂಡ್‌ವಿಚ್‌ ಮಾಡ್ಬೋದು ಅಂದ್ರೆ ನೀವು ನಂಬ್ತೀರಾ? ಇಲ್ಲ ಅದು ಸಾಧ್ಯವಿಲ್ಲ ಅಂತ ಅನ್ನೋದಾದ್ರೆ ಈಗಲೇ ಬ್ರೆಡ್‌ ಇಲ್ಲದೆಯೇ ಸ್ಯಾಂಡ್‌ವಿಚ್‌ ಮಾಡುವ ರೆಸಿಪಿ ಬಗ್ಗೆ ಇಲ್ಲಿ ತಿಳಿಯಿರಿ.

ಬೇಕಾಗುವ ಪದಾರ್ಥಗಳು:
ರವೆ
ಮೊಸರು
ಚಿಲ್ಲಿ ಫ್ಲೇಕ್ಸ್
ಉಪ್ಪು
ನೀರು
ಕ್ಯಾರೆಟ್
ಈರುಳ್ಳಿ
ಸ್ವೀಟ್ ಕಾರ್ನ್
ಕ್ಯಾಪ್ಸಿಕಂ
ಕೊತ್ತಂಬರಿ ಸೊಪ್ಪು
ಈನೋ ಫ್ರೂಟ್
ಸಾಲ್ಟ್
ಬೆಣ್ಣೆ
ಚೀಸ್ ಸ್ಲೈಸ್

ಮಾಡುವ ವಿಧಾನ:
* ಮೊದಲು ದೊಡ್ಡ ಬಟ್ಟಲಿನಲ್ಲಿ ಕಪ್ ರವೆ, ಮೊಸರು, ಚಿಲ್ಲಿ ಫ್ಲೇಕ್ಸ್ ಮತ್ತುಉಪ್ಪು ಹಾಗೂ ನೀರನ್ನು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ.
* ನಂತರ ಅದಕ್ಕೆ ಕ್ಯಾರೆಟ್, ಈರುಳ್ಳಿ, ಸ್ವೀಟ್ ಕಾರ್ನ್, ಕ್ಯಾಪ್ಸಿಕಂ ಮತ್ತು ಕೊತ್ತಂಬರಿ ಸೇರಿಸಿ, ದಪ್ಪ ಹಿಟ್ಟು ಆಗುವಂತೆ ಚೆನ್ನಾಗಿ ಮಿಶ್ರಣ ಮಾಡಿ. ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ.
* ಈಗ ಅದಕ್ಕೆ ಕಪ್ ನೀರು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ಬೆಣ್ಣೆಯೊಂದಿಗೆ ಸ್ಯಾಂಡ್ವಿಚ್ ಮೇಕರ್ ಗ್ರೀಸ್ ಮಾಡಿ.
* ಸ್ಯಾಂಡ್‌ವಿಚ್ ತಯಾರಿಸುವ ಮೊದಲು ಅದಕ್ಕೆ ಈನೋ ಫ್ರೂಟ್ ಸಾಲ್ಟ್ ಸೇರಿಸಿ, ನಿಧಾನವಾಗಿ ಮಿಶ್ರಣ ಮಾಡಿ.
* ಈಗ ಬ್ಯಾಟರ್ ಅನ್ನು ಸ್ಯಾಂಡ್‌ವಿಚ್ ಮೇಕರ್‌ಗೆ ಹಾಕಿ, ಅದರ ಮೇಲೆ ಚೀಸ್ ಸ್ಲೈಸ್ ಇಟ್ಟು, ಮತ್ತೆ ಅದರ ಮೇಲೆ ಬ್ಯಾಟರ್ ಹಾಕಿ.
* ಬಳಿಕ ಸ್ಯಾಂಡ್‌ವಿಚ್ ಮೇಕರ್‌ನ ಮುಚ್ಚಳವನ್ನು ಮುಚ್ಚಿ.
* ಸ್ಯಾಂಡ್‌ವಿಚ್ ಗೋಲ್ಡನ್ ಬ್ರೌನ್ ಆಗುವವರೆಗೆ ಗ್ರಿಲ್ ಮಾಡಿ, ಟೊಮೆಟೊ ಸಾಸ್‌ನೊಂದಿಗೆ ಸ್ಯಾಂಡ್‌ವಿಚ್ ಸವಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!