ಸಂಬಂಧಗಳೆಷ್ಟು ಸೂಕ್ಷ್ಮ ಅಲ್ವಾ? ಒಂದು ಸಂಬಂಧ ಬರೀ ಒಂದು ಸಂಬಂಧ ಅಷ್ಟೇ ಅಲ್ಲ, ಅದರ ಜತೆ ಸಾವಿರಾರು ಜನರ ಭಾವನೆಗಳು ಗಟ್ಟಿಯಾಗಿ ಹೆಣೆದಿರುತ್ತವೆ. ಕೆಲವರಂತೂ ಸಂಬಂಧ ತೊರೆದರೆ ಸಮಾಜ ನನ್ನನ್ನು ಹೇಗೆ ನೋಡುತ್ತದೆ ಎನ್ನುವ ಭಯದಲ್ಲಿಯೇ ತಮ್ಮ ಜೀವನವನ್ನೇ ಸವೆಸಿಕೊಂಡು ಹೋಗುತ್ತಾರೆ. ಗಂಡ ಹೆಂಡತಿ ಸಂಬಂಧವಂತೂ ಇನ್ನೂ ಸೂಕ್ಷ್ಮ, ಎಷ್ಟೋ ಮಂದಿಗೆ ತಮ್ಮ ಸಂಬಂಧ ಹಾಳಾಗಿದೆ ಅಥವಾ ಆರೋಗ್ಯವಾಗಿಲ್ಲ ಎನ್ನುವುದೇ ತಿಳಿದಿರುವುದಿಲ್ಲ. ಕೆಟ್ಟ ರಿಲೇಷನ್‌ಶಿಪ್ ಎಂದು ಯಾವಾಗ ಅನಿಸುತ್ತದೆ ನೋಡಿ..
- ಸಂಬಂಧದಲ್ಲಿ ನಿಮಗೆ ಯಾವುದೇ ಗೌರವ ಇಲ್ಲ, ನಿಮ್ಮನ್ನು ಮನುಷ್ಯ ಎಂದೂ ಪಾರ್ಟ್‌ನರ್ ಒಪ್ಪದಿದ್ದರೆ.
- ಮಾನಸಿಕವಾಗಿ, ದೈಹಿಕವಾಗಿ ನಿಮ್ಮ ಪತಿ ಅಥವಾ ಪತ್ನಿಯಿಂದ ನೋವುಂಟಾಗುತ್ತಿದ್ದರೆ.
- ನಿಮ್ಮ ಸಂಗಾತಿ ನಿಮ್ಮನ್ನು ಬಿಟ್ಟು ಇತರರನ್ನು ಪ್ರೀತಿಸುತ್ತಿದ್ದರೆ ಅಥವಾ ಎಕ್ಸ್ಟ್ರಾ ಮರೈಟಲ್ ಅಫೇರ್ ಇಟ್ಟುಕೊಂಡಿದ್ದರೆ
- ನಿಮ್ಮ ಸಂಗಾತಿ ಯಾವೊಂದು ಜವಾಬ್ದಾರಿಯನ್ನೂ ತೆಗೆದುಕೊಳ್ಳಲು ಒಪ್ಪದೇ ಇದ್ದರೆ
- ನಿಮ್ಮ ಸಂಗಾತಿಯ ಜತೆ ಭವಿಷ್ಯವೇ ಇಲ್ಲ ಎನಿಸುತ್ತಿದ್ದರೆ
- ನಂಬಿಕೆಯೇ ಇಲ್ಲ ಎಂದಾದರೆ
- ನಿಮ್ಮ ಸಂಗಾತಿಗೆ ನಿಮ್ಮ ಮಾತುಗಳು ಅರ್ಥವಾಗದೇ ಇದ್ದರೆ, ಅಥವಾ ಮಾತನಾಡಲು ಆಸಕ್ತಿಯೇ ಇಲ್ಲದೆ ಹೋದರೆ
- ಪ್ರತೀ ಬಾರಿ ನೀವೇ ಸಮಾಧಾನ, ಸಂಧಾನಕ್ಕೆ ಮುಂದಾದರೆ, ಎಲ್ಲ ವಿಷಯಗಳಲ್ಲಿಯೂ ನೀವೊಬ್ಬರೇ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದರೆ
- ನಿಮ್ಮ ಸಂಗಾತಿಗೆ ಮೆಚುರಿಟಿ ಇಲ್ಲದೆ ಹೋದರೆ, ಸಣ್ಣ ಪುಟ್ಟ ವಿಷಯಗಳೂ ಅರ್ಥವಾಗದೆ ಬರೀ ವಿತಂಡ ವಾದದಲ್ಲೇ ಜೀವನ ಕಳೆಯುತ್ತಿದ್ದರೆ.
ಎಲ್ಲರ ಜೀವನವೂ ಒಂದೇ ಇರುವುದಿಲ್ಲ, ಪಾರ್ಟ್‌ನರ್ ಬಿಟ್ಟು ದೂರಾದರೆ, ಅಥವಾ ಡಿವೋರ್ಸ್ ಪಡೆದರೆ ಅದು ಜಗತ್ತಿನ ಅಂತ್ಯವಲ್ಲ. ಅದರಾಚೆಯೂ ಜೀವನವಿದೆ, ಕೆಟ್ಟ ಸಂಬಂಧಗಳಿಂದ ಹೊರಬಂದು ಉತ್ತಮ ಜೀವನ ನಡೆಸಿದ ಸಾಕಷ್ಟು ಜನರಿದ್ದಾರೆ. ದೊಡ್ಡ ನಿರ್ಧಾರ ಕೈಗೊಳ್ಳುವ ಮುನ್ನ ಒಂದು ಕಡೆಯ ಚಾನ್ಸ್ ಕೊಡೋದನ್ನು ಮರೆಯಬೇಡಿ