ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಗ್ರಿಗಳು:
ಸ್ಪಿನಾಚ್
ಆಲೂಗಡ್ಡೆ
ಎಣ್ಣೆ
ಈರುಳ್ಳಿ
ಹಸಿಮೆಣಸಿನಕಾಯಿ
ಶುಂಠಿ ಪೇಸ್ಟ್
ಗರಂ ಮಸಾಲ
ಕಡಲೆಹಿಟ್ಟು
ಬ್ರೆಡ್ ತುಂಡುಗಳು
ನೀರು
ಎಣ್ಣೆ
ಉಪ್ಪು
ಮಾಡುವ ವಿಧಾನ:
* ಬಾಣಲಿಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ನಂತರ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಶುಂಠಿ ಪೇಸ್ಟ್ ಹಾಕಿ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ.
* ಈಗ ಸ್ಪಿನಾಚ್ ಎಲೆಗಳನ್ನು ಸೇರಿಸಿ. ಸ್ವಲ್ಪ ಸಮಯದ ಬಳಿಕ ಒಲೆಯಿಂದ ಕೆಳಗಿಳಿಸಿ.
* ಇದಕ್ಕೆ ಆಲೂಗಡ್ಡೆ, ಗರಂ ಮಸಾಲ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
* ನಂತರ ಸಣ್ಣ ಉಂಡೆಗಳಾಗಿ ಮಾಡಿಕೊಳ್ಳಿ.
* ಮತ್ತೊಂದು ಪಾತ್ರೆಯಲ್ಲಿ ಕಡಲೆಹಿಟ್ಟು, ಉಪ್ಪು ಮತ್ತು ನೀರನ್ನು ಹಾಕಿ ಹದವಾಗಿ ಕಲಸಿಕೊಳ್ಳಿ.
* ಮಾಡಿಟ್ಟುಕೊಂಡ ಹೂರಣವನ್ನು ಹಿಟ್ಟಿನೊಳಗೆ ಇಟ್ಟು ತಟ್ಟಿಕೊಳ್ಳಿ. ಇದಕ್ಕೆ ಬ್ರೆಡ್ ಪುಡಿಯೊಳಗೆ ಹೊರಳಿಸಿ ಎಣ್ಣೆಯಲ್ಲಿ ಹಾಕಿ ಹೊಂಬಣ್ಣಕ್ಕೆ ತಿರುಗುವವರೆಗೆ ಕರಿಯಿರಿ. ಇದೀಗ ಯಮ್ಮೀ ಬ್ರೇಕ್‌ಫಾಸ್ಟ್‌ಗೆ ಸ್ಪಿನಾಚ್ ಕಟ್‌ಲೆಟ್ ಸವಿಯಲು ಸಿದ್ಧ.