ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾನಮಾಗ್ರಿಗಳು:
1. ಹಾಲು
2. ಬೆಲ್ಲ
3. ಮೈದಾ
4. ನೀರು
5. ಸಕ್ಕರೆ
6. ಕೇಸರಿ
7. ಏಲಕ್ಕಿ
8. ಎಣ್ಣೆ
ಮಾಡುವ ವಿಧಾನ:
1. ಮೊದಲು ಒಂದು ಪಾತ್ರೆಗೆ ಹಾಲು ಮತ್ತು ಪುಡಿ ಮಾಡಿದ ಬೆಲ್ಲವನ್ನು ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಈ ಗಟ್ಟಿಯಾದ ಮಿಶ್ರಣಕ್ಕೆ ಚಿಟಿಕೆಯಷ್ಟು ಕೇಸರಿಯನ್ನು ಹಾಕಿ, ಮಿಶ್ರಣವನ್ನು ಚೆನ್ನಾಗಿ ತಿರುಗಿಸಿ ಉರಿಯಿಂದ ಕೆಳಗಿಳಿಸಿ.
2. ಮತ್ತೊಂದು ಪಾತ್ರೆಯಲ್ಲಿ ನೀರಿಗೆ ಸಕ್ಕರೆ ಮತ್ತು ಏಲಕ್ಕಿ ಹಾಕಿ ಸಕ್ಕರೆ ಪಾನಕ ತಯಾರಿಸಬೇಕು.
3. ಮೈದಾಕ್ಕೆ ಚಿಟಿಕೆಯಷ್ಟು ಉಪ್ಪು ಹಾಕಿ ಚೆನ್ನಾಗಿ ಕಲೆಸಿ ಅದನ್ನು ಚಿಕ್ಕ ಉಂಡೆಗಳಾಗಿ ಮಾಡಿ ಅದನ್ನು ಅಗಲವಾಗಿ ತಟ್ಟಬೇಕು. ಅದಕ್ಕೆ ಬೆಲ್ಲದ ಗಟ್ಟಿ ಮಿಶ್ರಣವನ್ನು ಹಾಕಿ ಮಡಚಿ ತ್ರಿಕೋನಾಕಾರದಲ್ಲಿ ಕತ್ತರಿಸಬೇಕು.
4. ನಂತರ ಅದನ್ನು ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಈ ತಿಂಡಿಯನ್ನು ಸಕ್ಕರೆ ಪಾನಕದಲ್ಲಿ ಅರ್ಧ ಗಂಟೆ ಹಾಕಿಡಬೇಕು.
ಇದೀಗ ಸಿಹಿಯಾದ ಸಮೋಸ ತಿನ್ನಲು ರೆಡಿ.