Sunday, December 10, 2023

Latest Posts

RECIPE| ಊಟಕ್ಕೆ ಬಾಳೆಕಾಯಿ ಮೊಸರು ರಾಯಿತ ಮಾಡಿ ಸವಿದು ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೇಕಾಗುವ ಸಾಮಾಗ್ರಿಗಳು

*ಬಾಳೆಕಾಯಿ
*ಹಸಿಮೆಣಸು
*ಕೊತ್ತಂಬರಿ ಸೊಪ್ಪು
*ಮೊಸರು
*ತುರಿದ ತೆಂಗಿನಕಾಯಿ
*ಉಪ್ಪು
*ಸಾಸಿವೆ
*ಜೀರಿಗೆ
*ಸ್ವಲ್ಪ ಇಂಗಿನ ಪುಡಿ
*ಕರಿಬೇವಿನೆಲೆ
*ಕೆಂಪು ಮೆಣಸು
*ಎಣ್ಣೆ

ಮಾಡುವ ವಿಧಾನ

* ಮೊದಲು ಉಪ್ಪು ಮತ್ತು ಸಾಕಷ್ಟು ನೀರು ಹಾಕಿ ಕುಕ್ಕರ್‌ನಲ್ಲಿ ಬಾಳೆಕಾಯಿಯನ್ನು ಬೇಯಿಸಿಕೊಳ್ಳಿ. * ಕುಕ್ಕರ್ ತಣ್ಣಗಾದ ನಂತರ, ಬೇಯಿಸಿದ ಬಾಳೆಕಾಯಿಯ ಸಿಪ್ಪೆಯನ್ನು ತೆಗೆಯಿರಿ. ನಂತರ ಚೆನ್ನಾಗಿ ಅದನ್ನು ಹಿಸುಕಿಕೊಳ್ಳಿ.
* ಈಗ ತೆಂಗಿನ ತುರಿಯನ್ನು ನುಣ್ಣಗೆ ಪೇಸ್ಟ್‌ನಂತೆ ರುಬ್ಬಿಕೊಳ್ಳಿ. ತದನಂತರ ಹಸಿಮೆಣಸನ್ನು ಮತ್ತು ಕರಿಬೇವಿನೆಲೆಯನ್ನು ಜೊತೆಯಾಗಿ ರುಬ್ಬಿಕೊಳ್ಳಿ. *ಇನ್ನು ಈ ಮಿಶ್ರಣಕ್ಕೆ ಮೊಸರನ್ನು ಸೇರಿಸಿ *ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದು ಬಿಸಿಯಾದೊಡನೆ ಸಾಸಿವೆ, ಜೀರಿಗೆ, ಕೆಂಪು ಮೆಣಸನ್ನು ಹಾಕಿ ಒಗ್ಗರಣೆ ತಯಾರು ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ಇಂಗಿನ ಪುಡಿ ಹಾಗೂ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಒಗ್ಗರಣೆ ಮಾಡಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!