ಋತುಚಕ್ರದ ವೇಳೆ ಮೂಡ್ ಸ್ವಿಂಗ್ ಆದ್ರೆ ಅದರಿಂದ ಹೊರಬರಲು ಹೀಗೆ ಮಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಋತುಚಕ್ರದ ವೇಳೆ ದೈಹಿಕ ಬದಲಾವಣೆಗಳ ಜೊತೆಗೆ ಮನಸ್ಸಿನಲ್ಲಾಗುವ ಬದಲಾವಣೆಗಳು ಕೂಡ ಸಹಜ. ಈ ವೇಳೆ ಮಹಿಳೆಯರಲ್ಲಿ ಮೂಡ್‌ ಸ್ವಿಂಗ್‌ ಆಗುತ್ತಿರುತ್ತದೆ, ಅದರಿಂದ ಹೊರಬರಲು ಏನು ಮಾಡಬೇಕು ಎಂದು ಇಲ್ಲಿ ತಿಳಿಯಿರಿ.

1. ಉತ್ತಮ ನಿದ್ದೆ:

ಋತುಚಕ್ರದ ವೇಳೆ ಉತ್ತಮ ನಿದ್ದೆ ಅಗತ್ಯ. ಒಳ್ಳೆಯ ನಿದ್ದೆಯಿಂದ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಕೂಡ ಉತ್ತಮವಾಗಿರುತ್ತದೆ.

2. ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ:

ಋತುಚಕ್ರದ ವೇಳೆ ದೇಹದಲ್ಲಿ ಹಾರ್ಮೋನ್ ಗಳು ಬಹಳ ಏರುಪೇರಾಗುತ್ತವೆ. ಇದರಿಂದ ನಮ್ಮ ಮನಸ್ಸಿನ ಮೇಲೂ ಬಾರೀ ಪರಿಣಾಮ ಬೀರುತ್ತದೆ. ಈ ಬದಲಾವಣೆಗಳನ್ನು ನಿಯಂತ್ರಿಸಲು ಮತ್ತು ಮನಸ್ಸನ್ನು ಶಾಂತಿಯಿಂದಿಡಲು ಧ್ಯಾನ ಮಾಡುವುದು ಒಳಿತು.

3. ಕೆಫೇನ್ ಮತ್ತು ಸಕ್ಕರೆಯ ಸೇವನೆ ಕಡಿಮೆ ಮಾಡಿ:

ಋತುಚಕ್ರದ ವೇಳೆ ಮೂಡ್ ಸ್ವಿಂಗ್‌ ಆಗುತ್ತದೆ. ಹೀಗಾಗಿ ಕೆಫೀನ್ ಸೇವನೆ ಖಂಡಿತವಾಗಿಯೂ ಒಳ್ಳೆಯದಲ್ಲ. ಈ ಸಮಯದಲ್ಲಿ ದೇಹಕ್ಕೆ ನೀರಿನ ಅಗತ್ಯವಿದೆ. ಹಾಗಾಗಿ ಆರೋಗ್ಯಯುತ ಜ್ಯೂಸ್‌ ಸೇವಿಸಿ, ಇದರಿಂದ ದೇಹವೂ ತಂಪಾಗಿರುತ್ತದೆ. ಜೊತೆಗೆ ಮನಸ್ಸೂ ಕೂಡ ಶಾಂತವಾಗುತ್ತದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!