ಅದಾನಿ ಉದ್ದಿಮೆಗೆ ಚೀನಾ ಹೂಡಿಕೆಯ ಕೊಂಡಿ?- ರಾಹುಲ್ ಗಾಂಧಿ ಆರೋಪದ ಫ್ಯಾಕ್ಟ್ ಚೆಕ್ ಇಲ್ಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇತ್ತೀಚೆಗಷ್ಟೇ ಸಂಸದ ಸ್ಥಾನದಿಂದ ಅನರ್ಹಗೊಂಡಿರುವ ರಾಹುಲ್‌ ಗಾಂಧಿ ಅದಾನಿ ಸಮೂಹದೊಂದಿಗೆ ಚೀನಾ ಮೂಲದ ವ್ಯಕ್ತಿಯ ನಂಟಿರುವುದಾಗಿ ಟ್ವೀಟೊಂದರಲ್ಲಿ ಆರೋಪಿಸಿದ್ದು ಚೀನಾದೊಂದಿಗೆ ಸಂಪರ್ಕಹೊಂದಿರುವುದಕ್ಕಾಗಿ ಪ್ರಧಾನಿಯವರನ್ನು ಟೀಕಿಸಿದ್ದಾರೆ. ಅದಾನಿ ವಾಚ್ ಎಂಬ ಹೆಸರಿನಲ್ಲಿ ಸುದ್ದಿಯೊಂದನ್ನು ಹಂಚಿಕೊಂಡಿರುವ ರಾಗಾ ಟ್ವೀಟ್‌ ನಲ್ಲಿ ಪ್ರಶ್ನಿಸಿರುವುದೇನೆಂದರೆ ಇಂದು ಭಾರತದಲ್ಲಿ ಬಹುತೇಕ ಬಂದರುಗಳನ್ನು, ಏರ್ಪೋರ್ಟ್‌ ಗಳನ್ನು ವಿದ್ಯುತ್‌ ಸರಬರಾಜನ್ನು ನಿರ್ವಹಿಸುತ್ತಿರುವ ಅದಾನಿ ಸಮೂಹವು ಪಿಎಂಸಿ ಪ್ರಾಜೆಕ್ಟ್ಸ್‌ ಎಂಬ ಕಂಪನಿಯೊಂದಿಗೆ ನಂಟು ಹೊಂದಿದೆ. ಇದರ ಮುಖ್ಯಸ್ಥ ಚಾಂಗ್ ಚಿಯೆನ್-ಟಿಂಗ್ ಎನ್ನುವರು ಚೀನಾ ಮೂಲದವರು. ಹಾಗಿದ್ದರೆ ಭಾರತದ ಭಾರತದ ನಿರ್ಣಾಯಕ ಬಂದರುಗಳು, ಏರ್ಪೋರ್ಟ್‌ ಗಳು ವಿದ್ಯುತ್ ಮಾರ್ಗಗಳನ್ನು ಚೀನಾದ ಕಂಪನಿ ನಿರ್ಮಿಸುತ್ತಿರೋದೇಕೆ? ನಿಯಂತ್ರಿಸುತ್ತಿರೋದೇಕೆ? ಪಿಎಂಸಿ ಪ್ರೋಜೆಕ್ಟ್ಸ್‌ ಎಂದರೆ ಪ್ರಧಾನಮಂತ್ರಿ ಚೈನೀಸ್‌ ಪ್ರಾಜೆಕ್ಟ್‌ ಎಂದರ್ಥವಾ? ಎಂದೆಲ್ಲ ಆರೋಪಿಸಿದ್ದಾರೆ ರಾಹುಲ್‌ ಗಾಂಧಿ.

ಹಾಗಿದ್ದರೆ ಕಾಂಗ್ರೆಸ್ಸಿನ ಮಾಜಿ ಸಂಸದ ರಾಹುಲ್‌ ಗಾಂಧಿ ಆರೋಪ ನಿಜವಾ? ಅದಾನಿ ಸಮೂಹದೊಂದಿಗೆ ಸಂಪರ್ಕ ಹೊಂದಿದೆ ಎನ್ನಲಾದ ಪಿಎಂಸಿ ಪ್ರಾಜೆಕ್ಟ್ಸ್‌ ಕಂಪನಿ ಚೀನಾದ್ದಾ? ಎಂಬ ಪ್ರಶ್ನೆಯ ಸತ್ಯಾಂಶವೇನು ? ಎಂಬುದಕ್ಕೆ ಉತ್ತರ ಇಲ್ಲಿದೆ.

ಅಸಲಿಗೆ ವರದಿಯಲ್ಲಿ ಉಲ್ಲೇಖಿಸಿದಂತೆ ಪಿಎಂಸಿ ಕಂಪನಿಯ ಮುಖ್ಯಸ್ಥ ಚಾಂಗ್ ಚಿಯೆನ್-ಟಿಂಗ್ ಅದಾನಿ ಸಮೂಹದ ತೈವಾನ್‌ ಪ್ರತಿನಿಧಿಯೇ ಹೊರತು ಚೀನಾ ಮೂಲದವರಲ್ಲ. ಚೀನಾ ತೈವಾನ್‌ ಅನ್ನು ತನ್ನ ಭಾಗವೆಂದು ಹೇಳಿಕೊಳ್ಳುತ್ತದೆಯಾದರೂ ಇಂದಿನವರೆಗೂ ತೈವಾನ್‌ ಚೀನಾದ ಆಡಳಿತಕ್ಕೆ ಒಳಪಟ್ಟಿಲ್ಲ. ತೈವಾನ್-ಚೀನಾ ನಡುವೆ ಸಂಘರ್ಷಮಯ ವಾತಾವರಣ ಇದೆಯೆಂಬುದು ನಿಜವಾದರೂ ತೈವಾನಿನ ಆಡಳಿತ ಸ್ವತಂತ್ರವಾಗಿಯೇ ನಡೆಸಲ್ಪಡುತ್ತಿದೆ. ಅಮೆರಿಕ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳೊಂದಿಗೆ ತೈವಾನ್ ಉತ್ತಮ ಬಾಂಧವ್ಯ ಹೊಂದಿದೆ. ನಿಜಾಂಶ ಹೀಗಿರುವಾಗಿ ರಾಹುಲ್‌ ಗಾಂಧಿ ಆರೋಪದಲ್ಲಿ ಹುರುಳಿಲ್ಲವೆಂಬುದು ಸಾಬೀತಾಗುತ್ತದೆ. ಈ ಕುರಿತು ಹಲವರು ಟ್ವೀಟ್‌ ಮಾಡಿದ್ದು ರಾಗಾ ಆರೋಪವನ್ನು ತಳ್ಳಿಹಾಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!