August 13, 2026
Thursday, August 13, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ‌ 57 | ಮನೆಯವರೆಲ್ಲರೂ ಇಷ್ಟಪಡುವ ಅಕ್ಕಿ ದೋಸೆ + ಬಟಾಣಿ ಸಾಗೂ ರೆಸಿಪಿ ಇಲ್ಲಿದೆ ನೋಡಿ

ನಿತ್ಯವೂ ಬೆಳಗ್ಗೆ ಎದ್ದ ನಂತರ ಇವತ್ತೇನು ತಿಂಡಿ ಮಾಡೋದು ಅನ್ನೋದು ನಿಜಕ್ಕೂ ಚಿಂತೆಯೇ. ಮೇಲ್ನೋಟಕ್ಕೆ ಏನೋ ಒಂದು ತಿಂದು ಹೋದರಾಯ್ತು ಎಂದು ಜನ ಹೇಳುತ್ತಾರಾದರೂ ಮನೆಯಲ್ಲಿರುವ ನಾಲ್ಕು ಮಂದಿಗೆ ನಾಲ್ಕು ತರಹದ ತಿಂಡಿ ಆಗೋದಿಲ್ಲ. ಅದರ ಮ್ಯಾಥ್ಸ್‌ ಮಾಡಿದರೆ ಉಳಿಯೋದು ಮತ್ತದೇ ಮೂರು ಮತ್ತೊಂದು ತಿಂಡಿ. ನಿಮ್ಮ ಮನೆಯಲ್ಲೂ ಇದೇ ಪರಿಸ್ಥಿತಿ ಇದ್ದರೆ ಇಂದೇ ಅಕ್ಕಿ ದೋಸೆ ಹಾಗೂ ಬಟಾಣಿ ಸಾಗು ಟ್ರೈ ಮಾಡಿ. ಎರಡರ ರೆಸಿಪಿಯೂ ಇಲ್ಲಿದೆ ನೋಡಿ..

ದೋಸೆಗೆ ಬೇಕಾದ ಸಾಮಾಗ್ರಿಗಳು: ಅಕ್ಕಿ, ಮೆಂತ್ಯೆ, ಉಪ್ಪು, ಸೋಡಾಪುಡಿ

ಮಾಡುವ ವಿಧಾನ : ಅಕ್ಕಿಯನ್ನು ನಾಲ್ಕೈದು ಗಂಟೆಗಳ ಕಾಲ ನೆನೆಸಿಡಿ, ಜೊತೆಗೆ ಎರಡು ಸ್ಪೂನ್‌ ಮೆಂತ್ಯೆ ಹಾಕಿರಿ. ಇದನ್ನು ರುಬ್ಬಿ ಜೊತೆಗೆ ಉಪ್ಪು ಹಾಕಿ, ಸೋಡಾಪುಡಿ ಚಿಟಿಕೆ ಹಾಕಿ ಬ್ಯಾಟರ್‌ ರೆಡಿ ಮಾಡ್ಕೊಳಿ


ಸಾಗೂಗೆ ಬೇಕಾಗುವ ಸಾಮಾಗ್ರಿಗಳು:
ಬಟಾಣಿ, ಆಲೂಗಡ್ಡೆ, ಬೀನ್ಸ್‌ ನಿಮ್ಮಿಷ್ಟದ ತರಕಾರಿ ಯಾವುದನ್ನಾದರೂ ಸೇರಿಸಿಕೊಳ್ಳಿ. ಈರುಳ್ಳಿ, ಟೊಮ್ಯಾಟೊ, ಹಸಿಮೆಣಸು, ಚಕ್ಕೆ, ಲವಂಗ, ಬೆಳ್ಳುಳ್ಳಿ, ಶುಂಠಿ, ಕಾಯಿ, ಸಾಂಬಾರ್‌ ಪುಡಿ

ಮಾಡುವ ವಿಧಾನ: ಮಿಕ್ಸಿಗೆ ಈರುಳ್ಳಿ, ಟೊಮ್ಯಾಟೊ, ಹಸಿಮೆಣಸು, ಚಕ್ಕೆ, ಲವಂಗ, ಬೆಳ್ಳುಳ್ಳಿ, ಶುಂಠಿ, ಕಾಯಿ, ಕೊತ್ತಂಬರಿ ಸೊಪ್ಪು ಹಾಗೂ ಸಾಂಬಾರ್‌ ಪುಡಿ ಹಾಕಿ ರುಬ್ಬಿಕೊಳ್ಳಿ. ಆನಂತರ ಒಗರಣೆಗೆ ಎಣ್ಣೆ ಸಾಸಿವೆ ಜೀರಿಗೆ ಕರಿಬೇವು, ಈರುಳ್ಳಿ, ಟೊಮ್ಯಾಟೊ, ತರಕಾರಿ ಹಾಗೂ ರುಬ್ಬಿದ ಮಸಾಲಾ ಹಾಕಿ ಒಂದು ವಿಶಲ್‌ ಕೂಗಿಸಿದ್ರೆ ಸಾಗೂ ರೆಡಿ



Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !