ಸಾಮಾನ್ಯವಾಗಿ ಕಾಳುಗಳನ್ನು ಬೇಯಿಸಿಕೊಂಡು ನೀರು ತೆಗೆದು ನಂತರ ಪಲ್ಯ ಮಾಡಲಾಗುತ್ತದೆ, ಕಾಳುಗಳನ್ನು ಬೇಯಿಸಿದ ನೀರನ್ನು ವೇಸ್ಟ್ ಮಾಡಬೇಕಾಗುತ್ತದೆ. ಹೀಗೆ ಮಾಡಬೇಡಿ ಪಲ್ಯ ಮಾಡಲು ಇನ್ನೊಂದು ಬೆಸ್ಟ್ ವಿಧಾನ ಎಂದರೆ ಸ್ಟೀಮ್ ಮಾಡುವುದು..
ಹೌದು, ಕಾಳುಗಳನ್ನು ತೂತದ ಪಾತ್ರೆಯಲ್ಲಿ ಹಾಕಿ ಸ್ಟೀಮ್ ಮಾಡಿ ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ
ನಂತರ ಈರುಳ್ಳಿ, ಟೊಮ್ಯಾಟೊ, ಹಾಕಿ ಬಾಡಿಸಿ, ಇದಕ್ಕೆ ಉಪ್ಪು, ಖಾರದಪುಡಿ, ಸಾಂಬಾರ್ ಪುಡಿ ಹಾಗೂ ಮನೆಯಲ್ಲಿ ಮಾಡಿದ ಮಸಾಲೆ ಪುಡಿಗಳನ್ನು ಹಾಕಿ
ನಂತರ ಅದಕ್ಕೆ ಕಾಳುಗಳನ್ನು ಹಾಕಿ, ಕೊತ್ತಂಬರಿ ಸೊಪ್ಪು ಹಾಕಿ ಕಾಯಿತುರಿ ಉದುರಿಸಿದರೆ ಪಲ್ಯ ರೆಡಿ