ಇಲ್ಲಿದೆ ನಿಮಗೆ ಬಂಪರ್ ಆಫರ್: ಈ ಸ್ಮಾರ್ಟ್‌ಫೋನ್ ಶಾಪ್‌ಲ್ಲಿ ಸಿಗುತ್ತೆ 2 ಕೆಜಿ ಟೊಮೆಟೊ ಫ್ರೀ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದಲ್ಲಿ ಟೊಮೆಟೊ ಬೆಲೆ 160 ರೂ. ಗಡಿ ದಾಟಿದೆ. ದಿನದಿಂದ ದಿನಕ್ಕೆ ಕನಿಷ್ಠ 10 ರಿಂದ 20 ರೂಪಾಯಿ ಏರಿಕೆಯಾಗುತ್ತಿದೆ.
ಈ ನಡುವೆ ಟೊಮೆಟೊವನ್ನು ಸ್ಮಾರ್ಟ್‌ಫೋನ್ ಶಾಪ್‌ನಲ್ಲಿ ಗ್ರಾಹಕರಿಗೆ ಉಚಿತವಾಗಿ ನೀಡಲಾಗುತ್ತಿದೆ.

ಹೌದು, ಮಧ್ಯ ಪ್ರದೇಶದ ಅಶೋಕನಗರದ ಸ್ಮಾರ್ಟ್‌ಫೋನ್ ಶಾಪ್ ಪ್ರತಿಯೊಬ್ಬರಿಗೆ 2 ಕೆಜಿ ಟೊಮೆಟೊ ಫ್ರೀಯಾಗಿ ನೀಡುತ್ತಿದ್ದಾರೆ . ಆದ್ರೆ ಒಂದು ಕಂಡೀಷನ್ ಅಪ್ಲೈ ಆಗಲಿದೆ. ಅದೇನೆಂದರೆ ಈ ಸ್ಮಾರ್ಟ್‌ಫೋನ್ ಶಾಪ್‌ಲ್ಲಿ ಮೊಬೈಲ್ ಫೋನ್ ಖರೀದಿಸುವ ಗ್ರಾಹಕರಿಗೆ ಉಚಿತವಾಗಿ 2 ಕೆಜಿ ಟೊಮೆಟೊ ನೀಡಲಾಗುತ್ತಿದೆ.

ಟೊಮೆಟೊ ಬೆಲೆ ದುಬಾರಿಯಾಗಿರುವ ಮೊಬೈಲ್ ಫೋನ್ ವ್ಯಾಪಾರ ಹೆಚ್ಚಿಸಲು ಸ್ಮಾರ್ಟ್‌ಫೋನ್ ಶಾಪ್ ಮಾಲೀಕ ಅಭಿಷೇಕ್ ಅಗರ್ವಾಲ್ ಹೊಸ ಆಫರ್ ಜಾರಿ ಮಾಡಿದ್ದಾರೆ. ಮೊಬೈಲ್ ಫೋನ್, ಇಯರ್ ಫೋನ್, ಇಯರ್ ಬಡ್ಸ್, ಚಾರ್ಜರ್ ಸೇರಿದಂತೆ ಯಾವುದೇ ವಸ್ತುಗಳನ್ನು ಈ ಸ್ಮಾರ್ಟ್‌ಪೋನ್ ಶಾಪ್‌ನಲ್ಲಿ ಖರೀದಿಸಿದರೆ ಟೊಮೆಟೊ ಉಟಿತವಾಗಿ ನೀಡಲಾಗುತ್ತಿದೆ. ಈ ಆಫರ್ ಪರಿಣಾಮ ಅಭಿಷೇಕ್ ಅಗರ್ವಾಲ್ ಶಾಪ್‌ಗೆ ಭಾರಿ ಗ್ರಾಹಕರು ಆಗಮಿಸುತ್ತಿದ್ದಾರೆ. ಹಲವರು ಟೊಮೆಟೊಗಾಗಿ ಮೊಬೈಲ್ ಹಾಗೂ ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುತ್ತಿದ್ದಾರೆ.

ಇಂದು ಟೊಮೆಟೊ ಬೆಲೆ ದುಬಾರಿಯಾಗಿದೆ. ಇತ್ತ ಮೊಬೈಲ್ ಮಾರುಕಟ್ಟೆಯಲ್ಲೂ ಭಾರಿ ಪೈಪೋಟಿ ಇದೆ. ಹೀಗಾಗಿ ನಾವು ಗ್ರಾಹಕರಿಗೆ ಆಫರ್ ನೀಡಿದ್ದೇವೆ. ಇದೀಗ ಜನರು ಟೊಮೆಟೊ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ನಾವು ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗೆ 2 ಕೆಜಿ ಟೊಮೆಟೊ ಉಚಿತವಾಗಿ ನೀಡುವ ಆಫರ್ ಘೋಷಿಸಲಾಯಿತು. ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವ ಗ್ರಾಹಕರಿಗೆ ಅವರ ಖರೀದಿಯ ಬೆಲೆಗೆ ತಕ್ಕಂತೆ ಅರ್ಧ ಕೆಜಿ, 1 ಕಜಿ ಹಾಗೂ ಗರಿಷ್ಠ 2 ಕೆಜಿ ಟೊಮೆಟೊ

ಅಭಿಷೇಕ್ ಅಗರ್ವಾಲ್ ಮಾರ್ಕೆಟಿಂಗ್ ಐಡಿಯಾಗೆ ಜನರು ಫಿದಾ ಆಗಿದ್ದಾರೆ. ಟ್ರೆಡಿಂಗ್ ವಿಚಾರವನ್ನೇ ಮುಂದಿಟ್ಟುಕೊಂಡು ಸ್ಮಾರ್ಟ್‌ಫೋನ್ ಜೊತೆಗೆ ಟೊಮೆಟೊ ನೀಡುವ ಮೂಲಕ ಭಾರಿ ಜನಪ್ರಿಯತೆ ಗಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!