ರುಚಿಕರ ಅನಾನಸ್ ಹಣ್ಣಿನ ಗೊಜ್ಜು, ರೆಸಿಪಿ ಇಲ್ಲಿದೆ

ಹೊಸದಿಂಗತ ಡಿಜಿಟಲ್ ಡೆಸ್ಕ್:

ಅನಾನಸ್ ಗೊಜ್ಜು ಮದುವೆ ಮನೆಗಳಲ್ಲಿ ಹಬ್ಬಗಳಲ್ಲಿ ಹೆಚ್ಚಾಗಿ ತಯಾರಿಸಲ್ಪಡುತ್ತಾರೆ. ಅನಾನಸ್ ಗೊಜ್ಜು, ದೋಸೆ ಮತ್ತು ಇಡ್ಲಿ ಒಳ್ಳೆಯ ಕಾಂಬಿನೇಶನ್. ಬೆಂಗಳೂರು, ಮೈಸೂರು, ಉಡುಪಿ, ಮಂಗಳೂರು ಹೀಗೆ ಎಲ್ಲಾ ಕಡೆಗಳಲ್ಲೂ ಈ ರೆಸಿಪಿ ಬಳಕೆಯಲ್ಲಿದೆ.

ತಯಾರಿಸಲು ಬೇಕಾಗುವ ಸಾಮಗ್ರಿಗಳು:

ಅನಾನಸ್, ನೀರು, ಹುಣಿಸೆ ಹಣ್ಣಿನ ರಸ್, ಬೆಲ್ಲು, ಅರಿಶಿನ ಪುಡಿ, ಉಪ್ಪು ಮಸಾಲಾ, ಸಾಸಿವೆ, ಎಣ್ಣೆ, ಉದ್ದಿನ ಬೇಳೆ, ಮೆಂತ್ಯ, ಕೆಂಪು ಮೆಣಸಿನ ಕಾಯಿ, ಕರಿಬೇವಿನ ಎಲೆ, ತೆಂಗಿನ ತುರಿ, ತೆಂಗಿನ ಎಣ್ಣೆ, ಸಾಸಿವೆ, ಕೆಂಪು ಮೆಣಸಿನ ಕಾಯಿ, ಕರಿಬೇವಿನ ಎಲೆ.

ಮಾಡುವ ವಿಧಾನ:

ಹಚ್ಚಿದ ಅನಾನಸ್ ಗೆ ನೀರು ಹಾಕಿ 10 ನಿಮಿಷ ಬೇಯಿಸಿಕೊಳ್ಳಿ. ನಂತರ ಮಸಾಲಾ ತಯಾರಿಸಲು, ಎಣ್ಣೆ, ಉದ್ದಿನ ಬೇಳೆ, ಮೆಂತ್ಯ, ಕೆಂಪು ಮೆಣಸಿನ ಕಾಯಿ, ಕರಿಬೇವಿನ ಎಲೆಯನ್ನು ಹುರಿದುಕೊಳ್ಳಿ. ಅದಕ್ಕೆ ತೆಂಗಿನ ತುರಿ ನೀರು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಅನಾನಸ್ ಗೆ ಅರಿಶಿನ, ಉಪ್ಪು, ಬೆಲ್ಲ ಬೆರೆಸಿ ಮಿಶ್ರಣ ಮಾಡಿ ಒಲೆಯ ಮೇಲಿಟ್ಟು ಕುದಿಸಿ. ಅದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿಕೊಳ್ಳಿ. ಸ್ವಲ್ಪ ನೀರನ್ನು ಬೆರೆಸಿ 10 ನಿಮಿಷ ಕುದಿಸಿ. ಆಗಾಗ ಸೌಟಿನಿಂದ ತಿರುವುತ್ತಿರಿ. ರೆಡಿಯಾದ ಪೈನಾಪಲ್ ಕರಿಗೆ ವಗ್ಗರಣೆ ಹಾಕಿದ್ರೆ ಸವಿಯಲು ಸಿದ್ದ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!