September 26, 2026
Saturday, September 26, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 71 | ಒಂದೊಳ್ಳೆ ಓವರ್‌ನೈಟ್‌ ಪ್ರೋಟೀನ್‌ ಓಟ್ಸ್‌ ರೆಸಿಪಿ ಇಲ್ಲಿದೆ ನೋಡಿ

ಸಾಮಾಗ್ರಿಗಳು
ಓಟ್ಸ್‌
ಡ್ರೈ ಫ್ರೂಟ್ಸ್‌
ಸ್ಲಿಮ್‌ ಮಿಲ್ಕ್‌ ಅಥವಾ ರೆಗ್ಯುಲರ್‌ ಮಿಲ್ಕ್‌
ಪ್ರೋಟೀನ್‌ ಪೌಡರ್‌
ಸಿಹಿಗೆ ಬೆಲ್ಲ, ಶುಗರ್‌ ನಿಮ್ಮಿಷ್ಟದ್ದು
ಚಿಯಾ ಸೀಡ್ಸ್‌

ಮಾಡುವ ವಿಧಾನ


ಮೊದಲು ಬೌಲ್‌ಗೆ ಓಟ್ಸ್‌, ಚಿಯಾ ಸೀಡ್ಸ್‌ ಹಾಕಿ ನಂತರ ಇದಕ್ಕೆ ಸ್ಲಿಮ್‌ ಮಿಲ್ಕ್‌ ಹಾಕಿ ಮಿಕ್ಸ್‌ ಮಾಡಿ
ಆನಂತರ ನಿಮ್ಮಿಷ್ಟದ ಡ್ರೈ ಫ್ರೂಟ್ಸ್‌, ಬಾದಾಮಿ, ದ್ರಾಕ್ಷಿ ಹಾಕಿದರೆ ಚೆನ್ನಾಗಿರುತ್ತದೆ. ನಿಮಗೆ ಯಾವುದು ಇಷ್ಟವೋ ಎಲ್ಲವನ್ನೂ ಹಾಕಬಹುದು
ಜೊತೆಗೆ ಸೂರ್ಯಕಾಂತಿ ಬೀಜ, ಫ್ಲಾಕ್ಸ್‌ ಸೀಡ್ಸ್‌ ಹಾಗೂ ಕುಂಬಳಕಾಯಿ ಬೀಜವನ್ನು ಹಾಕಿ
ಸಿಹಿಗೆ ಬೇಕಾದ್ದು ಹಾಕಿ, ಪ್ರೋಟೀನ್‌ ಪೌಡರ್‌ ಹಾಕಿ. ಪ್ರೋಟೀನ್‌ ಇಲ್ಲದಿದ್ದರೂ ಪರವಾಗಿಲ್ಲ ಹಾಗೆಯೇ ತಿನ್ನಬಹುದು
ಇದನ್ನು ರಾತ್ರಿಯಿಡೀ ಫ್ರಿಡ್ಜ್‌ನಲ್ಲಿ ನೆನೆಯಲು ಬಿಡಿ. ಬೆಳಗ್ಗೆ ನಿಮಗೆ ಇಷ್ಟವಾಗುವ ಫ್ರೆಶ್‌ ಫ್ರೂಟ್ಸ್‌ ಹಾಕಿಕೊಂಡು ತಿಂದುಬಿಡಿ.

ಇದೇ ಓಟ್ಸ್‌ಗೆ ಪೀನಟ್‌ ಬಟರ್‌, ಕಾಫಿಯ ಡಿಕಾಕ್ಷನ್‌, ಚಾಕೋಲೆಟ್‌ ಸಾಸ್‌ ಇನ್ನಿತರ ಪದಾರ್ಥಗಳನ್ನು ಹಾಕಬಹುದು. ನಿತ್ಯವೂ ಓಟ್ಸ್‌ ತಿನ್ನುವವರು ಬೇರೆ ಫ್ಲೇವರ್ಸ್‌ ಟ್ರೈ ಮಾಡಬಹುದು

Must Read