ಮಕ್ಕಳಿಂದ ಕಲಿಯೋಕೆ ಸಾಕಷ್ಟಿದೆ. ಮಕ್ಕಳಿದ್ದಾಗ ಕಲಿತಿದ್ದನ್ನು ಮರೆತು ಇನ್ನೇನೋ ಕಲಿಯೋದಕ್ಕೆ ಹಂಬಲಿಸುತ್ತೇವೆ. ಆದರೆ ಒಮ್ಮೆ ಹಿಂದಕ್ಕೆ ಹೋಗಿ ಯೋಚಿಸಿದ್ರೆ ಮಕ್ಕಳಿಂದ ಕಲಿಯೋದಕ್ಕೆ ಸಾಕಷ್ಟಿದೆ ಎನಿಸುತ್ತದೆ. ಯಾವುದು ನೋಡಿ..
ಮಕ್ಕಳ ಇಮ್ಯಾಜಿನೇಷನ್‌ಗೆ ಹ್ಯಾಟ್ಸ್ ಆಫ್ ಅನ್ಬೇಕು. ನೀವು ಅವರಂತೆ ಇಮ್ಯಾಜಿನ್ ಮಾಡಿನೋಡಿ, ಕ್ರಿಯೇಟಿವ್ ಐಡಿಯಾಗಳು ಬರಬಹುದು.
ಜೀವನದ ಬಗ್ಗೆ ಅವರಿಗೆಷ್ಟು ಕ್ಯೂರಿಯಾಸಿಟಿ ಅಲ್ವಾ? ಸಾವಿರ ಪ್ರಶ್ನೆ ಕೇಳ್ತಾರೆ. ಆ ಕ್ಯೂರಿಯಾಸಿಟಿ ಉಳಿಸಿಕೊಂಡ್ರೆ ಎಷ್ಟೊಂದು ವಿಷಯಗಳನ್ನು ತಿಳಿದುಕೊಳ್ತೀರಿ.
ಮಕ್ಕಳಿಗೆ ಫ್ರೆಂಡ್ಸ್ ಮಾಡಿಕೊಳ್ಳೋದು ಸುಲಭ, ಆದರೆ ದೊಡ್ಡವರಿಗೆ ಈಗೋ, ಎಲ್ಲರನ್ನೂ ಸ್ನೇಹಿತರಂತೆ ಕಾಣಿ.
ಭಾವನೆಗಳನ್ನು ಮಕ್ಕಳು ಮುಚ್ಚಿಡೋದಿಲ್ಲ. ಕೋಪ ಬಂದ್ರೆ ಕೋಪ, ಪ್ರೀತಿ ಬಂದ್ರೆ ಪ್ರೀತಿ. ಮನಸ್ಸನ್ನು ಡಸ್ಟ್‌ಬಿನ್ ಮಾಡಿಕೊಳ್ಳದೇ ಎಲ್ಲವನ್ನೂ ಎಕ್ಸ್‌ಪ್ರೆಸ್ ಮಾಡಿ.
ಮಕ್ಕಳು ನಗು ಹೇಗಿದೆ ಅಲ್ವಾ? ಯಾವುದೇ ಅಡಕ ಇಲ್ಲ, ನಿಷ್ಕಲ್ಮಶವಾದ ನಗು ಅವರದ್ದು. ನೀವು ಕೂಡ ಹಾಗೇ ಇರಿ.
ನಿಮಗೆ ಪುಟ್ಟ ಗಾಯ ಆದರೂ ಮಕ್ಕಳು ಓಡಿ ಬರ್ತಾರೆ, ಮೂಡ್ ಸರಿ ಇಲ್ಲ ಎಂದರೆ ಮುದ್ದು ಮಾಡ್ತಾರೆ. ಅವರಂತೆ ಕೇರಿಂಗ್ ನೇಚರ್ ಬೆಳೆಸಿಕೊಳ್ಳಿ.
ಅವರಷ್ಟು ಎನರ್ಜಿ ಯಾರಿಗಿದೆ ಹೇಳಿ? ಒಂದು ಲೋಟ ಹಾಲು ಕುಡಿದಿದ್ರೂ ಊರೆಲ್ಲಾ ಓಡಾಡೋ ಅಷ್ಟು ಎನರ್ಜಿ ಅವರಿಗಿದೆ.
ಸಣ್ಣ ವಿಷಯದಲ್ಲಿ ಖುಷಿ ಕಾಣ್ತಾರೆ. ಚಪಾತಿ ಹಿಟ್ಟನ್ನು ಮುಟ್ಟೋಕೆ ಕೊಟ್ರೆ ಅಲ್ಲೇ ಖುಷಿಯಾಗ್ತಾರೆ. ಸಣ್ಣ ಖುಷಿಗಳನ್ನು ಅವರಂತೆ ಅನುಭವಿಸಿ.