ಸಾಮಾಗ್ರಿಗಳು
ಎಣ್ಣೆ
ಸಾಸಿವೆ
ಜೀರಿಗೆ
ಕಡ್ಲೆಬೇಳೆ
ಉದ್ದಿನಬೇಳೆ
ಹೆಸರುಬೇಳೆ
ಶೇಂಗಾ
ಕಡ್ಲೆ
ಬೆಳ್ಳುಳ್ಳಿ
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಒಣಮೆಣಸು
ಕೊತ್ತಂಬರಿ ಸೊಪ್ಪು
ಉಪ್ಪು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ, ಕಡ್ಲೆಬೇಳೆ, ಉದ್ದಿನಬೇಳೆ, ಹೆಸರುಬೇಳೆ, ಶೇಂಗಾ,ಕಡ್ಲೆ, ಬೆಳ್ಳುಳ್ಳಿ ಹಾಕಿ ಬಾಡಿಸಿ
ಆನಂತರ ಈರುಳ್ಳಿ, ಟೊಮ್ಯಾಟೊ, ಹಸಿಮೆಣಸು ಹಾಕಿ ಮಿಕ್ಸ್ ಮಾಡಿ
ಎಲ್ಲವೂ ಬೆಂದ ನಂತರ ಕೊತ್ತಂಬರಿ ಸೊಪ್ಪು, ಅರಿಶಿಣ ಹಾಕಿ ಒಲೆ ಆರಿಸಿ
ಫ್ರೆಶ್ ಆಗಿರುವ ತೆಂಗಿನ ತುರಿಯನ್ನು ಇದಕ್ಕೆ ಹಾಕಿ
ಎಲ್ಲವೂ ತಣ್ಣಗಾದ ಬಳಿಕ ಮಿಕ್ಸಿ ಮಾಡಿದ್ರೆ ಚಟ್ನಿ ರೆಡಿ, ಇದು ನಿಮ್ಮ ರೊಟ್ಟಿಯ ರುಚಿಯನ್ನು ನೆಕ್ಸ್ಟ್ ಲೆವೆಲ್‌ಗೆ ಕೊಂಡೊಯ್ಯೋದು ಗ್ಯಾರಂಟಿ



