ತಡರಾತ್ರಿ ಸಿಂಗಾಪೂರ್‌ನಿಂದ ವಾಪಾಸಾದ ಎಚ್‌ಡಿಕೆ, ಮೈತ್ರಿ ಬಗ್ಗೆ ಹೀಗಂದ್ರು..

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ವಿಧಾನಸಭೆ ಚುನಾವಣೆಯ ಮತ ಎಣಿಕೆ ಇನ್ನೇನು ಕೆಲವೇ ನಿಮಿಷಗಳಲ್ಲಿ ಆರಂಭವಾಗಲಿದೆ. ಚುನಾವಣೆ ಮುಗಿಯುತ್ತಿದ್ದಂತೆಯೇ ಸಿಂಗಾಪೂರ್‌ನಲ್ಲಿ ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದ ಎಚ್‌ಡಿಕೆ ಇದೀಗ ತಡರಾತ್ರಿ ಬೆಂಗಳೂರಿಗೆ ವಾಪಾಸಾಗಿದ್ದಾರೆ.

ಏರ್‌ಪೋರ್ಟ್‌ನಲ್ಲಿ ಅಭಿಮಾನಿಗಳು ಎಚ್‌ಡಿಕೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇನ್ನು ಮೈತ್ರಿ ಬಗ್ಗೆ ಪ್ರಶ್ನೆ ಎದುರಾಗಿದ್ದು, ಗೆಲ್ಲುವ ಸತತ ಪ್ರಯತ್ನ ಮಾಡಿದ್ದೇನೆ. ಮತದಾರನ ಬಳಿ ಒಂದು ಅವಕಾಶಕ್ಕಾಗಿ ಕೋರಿದ್ದೇನೆ, ನೋಡೋಣ ಮೊದಲು ಫಲಿತಾಂಶ ಬರಲಿ. ಮೈತ್ರಿ ಬಗ್ಗೆ ಈವರೆಗೂ ಯಾವ ನಾಯಕರೂ ನನ್ನನ್ನು ಸಂಪರ್ಕ ಮಾಡಿಲ್ಲ. ಮೊದಲು ಜನಾದೇಶ ಬರಲಿ ನಂತರ ನೋಡೋಣ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!