ಹೊಸದಿಗಂತ ಡಿಜಿಟಲ್ ಡೆಸ್ಕ್:
ಆದಿಪುರುಷ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ನಟಿಸುತ್ತಿರುವ ಪ್ರಭಾಸ್‌ಗೆ ಈ ವರ್ಷ ದೆಹಲಿಯ ಲವಕುಶ್ ರಾಮಲೀಲಾ ಮೈದಾನದಲ್ಲಿ ರಾವಣನ ದಹನ ಮಾಡಲು ಆಹ್ವಾನಿಸಲಾಗಿದೆ. ಲವಕುಶ ರಾಮಲೀಲಾ ಸಮಿತಿಯು ಪ್ರಭಾಸ್ ಅವರನ್ನು ಭೇಟಿ ಮಾಡಿ ಅಕ್ಟೋಬರ್ 5 ರಂದು ದಸರಾ ಸಂದರ್ಭದಲ್ಲಿ ರಾವಣನ ಪ್ರತಿಕೃತಿ ದಹನಕ್ಕೆ ಮುಖ್ಯ ಅತಿಥಿಯಾಗಿ ಬರುವಂತೆ ಆಹ್ವಾನಿಸಿತು.
ಸೆಪ್ಟೆಂಬರ್ 26 ರಿಂದ ದಸರಾ ಆಚರಣೆಗಳು ಪ್ರಾರಂಭವಾಗುತ್ತಿದ್ದಂತೆ, ಈ ವರ್ಷ ಸಮಿತಿಯು ಕೆಂಪು ಕೋಟೆಯಲ್ಲಿ ಅಯೋಧ್ಯೆಯ ರಾಮಮಂದಿರದ ವಿಷಯದ ಮೇಲೆ ಮಂಟಪವನ್ನು ಸ್ಥಾಪಿಸುತ್ತಿದೆ. ಲವಕುಶ ರಾಮಲೀಲಾ ಸಮಿತಿಯ ಮುಖ್ಯಸ್ಥ ಅರ್ಜುನ್ ಕುಮಾರ್ ಮಾತನಾಡಿ, ದುಷ್ಟರ ವಿರುದ್ಧ ಒಳಿತಿನ ವಿಜಯದ ಸಂಕೇತವಾದ ರಾವಣನ ಪ್ರತಿಕೃತಿಯನ್ನು ಸುಡುವುದು ಆದಿಪುರುಷನಲ್ಲಿ ರಾಮನ ಪಾತ್ರಧಾರಿ ಪ್ರಭಾಸ್ ಸೂಕ್ತ ಎನಿಸಿ ಈ ನಿರ್ಧಾರ ಮಾಡಿರುವುದಾಗಿ ತಿಳಿಸಿದರು.
ರಾವಣ, ಕುಂಭಕರ್ಣ ಮತ್ತು ಮೇಘನಾಥನ ಪ್ರತಿಕೃತಿಗಳನ್ನು ಪ್ರಭಾಸ್ ಬಾಣದಿಂದ ಸುಡುತ್ತಾರೆ. ಈ ಹಿಂದೆ ಅಕ್ಷಯ್ ಕುಮಾರ್, ಅಜಯ್ ದೇವಗನ್, ಜಾನ್ ಅಬ್ರಹಾಂ ಮುಂತಾದ ನಟರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.