ರಾಜಧಾನಿಯಲ್ಲಿ ಹೈಟೆಕ್​ ಜಿಂಕೆ ಬೇಟೆ: ಬೇಟೆಗಾರರನ್ನು ಬೇಟೆಯಾಡಿದ ಅರಣ್ಯಾಧಿಕಾರಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿಯಲ್ಲಿ ಹೈಟೆಕ್ ಜಿಂಕೆ ಬೇಟೆ ನಡೆಯುತ್ತಿದೆ. ರುಚಿಕರವಾದ ಮಾಂಸವನ್ನು ತಿನ್ನಲು ಬಯಸಿದವರು ಅರಣ್ಯಾಧಿಕಾರಿಗಳ ಬೇಟೆಗೆ ಬೆಚ್ಚಿಬಿದ್ದು ಕಾಲ್ಕಿತ್ತಿದ್ದಾರೆ.

ಜಿಂಕೆ ಬೇಟೆಯಾಡುತ್ತಿದ್ದವರನ್ನು ಬೆಂಗಳೂರು ಹೊರ ವಲಯ ಆನೇಕಲ್​ನಲ್ಲಿ ಅರಣ್ಯಾಧಿಕಾರಿಗಳು ಬೇಟೆಯಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆನೇಕಲ್ ವಲಯ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆ ವೇಳೆ ಖದೀಮರು ಸಿಕ್ಕಿಬಿದ್ದಿದ್ದಾರೆ. ಮುತ್ಯಾಲಮಡು ಪ್ರವಾಸಿ ತಾಣ ಬಳಿ ಜಿಂಕೆ ಬೇಟೆಯಾಡುತ್ತಿದ್ದ ಮೂವರನ್ನು ಬಂಧಿಸಲಾಗಿದೆ. ಬೆಳಗಿನ ಜಾವ ಜಿಂಕೆ ಬೇಟೆಯಾಡಿದ ಆರು ಮಂದಿಯ ಗುಂಪು ಖಾಸಗಿ ಜಮೀನಿನಲ್ಲಿ ಮಾಂಸವನ್ನು ಹಂಚಿಕೊಳ್ಳುತ್ತಿದ್ದರು. ಜಿಂಕೆ ಹಂತಕರು ಮಾಂಸ ಹಂಚಿಕೊಂಡು ಬೈಕ್ ನಲ್ಲಿ ಹೊರಟಿದ್ದಾಗ ಖದೀಮರು ಸಿಕ್ಕಿಬಿದ್ದಿದ್ದಾರೆ.

ಮಾಂಸದ ಸಮೇತ ಖದೀಮರನ್ನು ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಬಳಿಕ ಬೇಟೆಯಾಡುತ್ತಿದ್ದ ಸ್ಥಳಕ್ಕೆ ಕರೆದೊಯ್ದು ಪರಿಶೀಲನೆ ನಡೆಸಿದ್ದಾರೆ. ಬೇಟೆಯಾಡುವ ಸ್ಥಳದಲ್ಲಿ ಪೋರ್ಡ್ ಕಾರು ಮತ್ತು ಮೂವರು ಬೇಟೆಗಾರರು ಇದ್ದರು. ಪೊಲೀಸರನ್ನು ಕಂಡ ಮೂವರೂ ಕಾರಿನಿಂದ ಇಳಿದು ಓಡಿಹೋಗಿದ್ದಾರೆ. ಇದೀಗ ಬೈಕ್ ನಲ್ಲಿ ಸಿಕ್ಕಿಬಿದ್ದ ಮೂವರನ್ನು ಬಂಧಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!