ಸಚಿವ ಸಂಪುಟ ಬದಲಾವಣೆ, ಪುನರ್ ರಚನೆ ಬಗ್ಗೆ ಹೈಕಮಾಂಡ್ ನಿರ್ಣಯ: ಯತ್ನಾಳ್

ಹೊಸ ದಿಗಂತ ವರದಿ , ವಿಜಯಪುರ:

ಸಚಿವ ಸಂಪುಟ ಬದಲಾವಣೆ, ಪುನರ್ ರಚನೆ ಬಗ್ಗೆ ನಮ್ಮ ಪಕ್ಷದ ಹೈಕಮಾಂಡ್ ನಿರ್ಣಯ ಕೈಗೊಳ್ಳುತ್ತೆ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಜಿಲ್ಲೆಯ ಇಂಚಗೇರಿಯಲ್ಲಿ ಸಚಿವ ಸಂಪುಟ ವಿಸ್ತರಣೆ ವಿಚಾರ ಕುರಿತು ಭಾನುವಾರ ಪ್ರತಿಕ್ರಿಯಿಸಿ, ಇದರ ಬಗ್ಗೆ ಕೇಂದ್ರದ ಪಕ್ಷದ ವರಿಷ್ಠರಿಂದ ಯಾವುದೆ ಸ್ಪಷ್ಟತೆ ಇಲ್ಲ. ಈಗ ಏನು ಮಾತನಾಡಿದರೂ ಅದು ಊಹಾ ಪೋಹ ಆಗುತ್ತೆ ಎಂದರು.
ಒಟ್ಟಾರೆ ನಾಳೆ ನಡೆಯುವ ರಾಜ್ಯ ಕಾರ್ಯಕಾರಣಿ ನಂತರ ಒಳ್ಳೆಯ ಬೆಳವಣಿಗೆ ಆಗುತ್ತೆ ಎಂಬ ವಿಶ್ವಾಸ ಇದೆ ಎಂದರು.
ದೆಹಲಿ ಭೇಟಿ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ನಾನು ದೆಹಲಿಗೆ ಹೋಗಿದ್ದೆ. ನಮ್ಮ ವಯಕ್ತಿಕ ಕೆಲಸಕ್ಕಾಗಿ ಹೋಗಿದ್ದೆ. ಪ್ರಲ್ಹಾದ ಜೋಶಿಯವರನ್ನ ಭೇಟಿ ಮಾಡಿದೆ, ನಮ್ಮ ಸಂಸದರನ್ನ ಭೇಟಿ ಮಾಡಿದೆ ಎಂದರು.
ಮಂತ್ರಿ ಆಗಲು ಲಾಬಿ‌ ಮಾಡಲು ನಾನೇನು ಹೋಗಿರಲಿಲ್ಲ. ಕೇಂದ್ರ ಸಚಿವ ಭೋಪೇಂದ್ರ ಯಾದವರ ಭೇಟಿಗಾಗಿ ನಾನು ಅರವಿಂದ ಬೆಲ್ಲದ ಹೋಗಿದ್ವಿ. ಅವರ ಬಳಿ ಕೂಡ ಕಾರ್ಖಾನೆಯ ವಯಕ್ತಿಕ ಕೆಲಸಕ್ಕಾಗಿ ಹೋಗಿದ್ವಿ,
ಯಾವುದೆ ರಾಕೀಯಕ್ಕಾಗಿ ಅಲ್ಲ ಎಂದರು.
2ಎ ಮೀಸಲಾತಿ ಹೋರಾಟ ವಿಚಾರ ಕುರಿತು ಪ್ರತಿಕ್ರಿಯಿಸಿ, ಈ ಬಗ್ಗೆ ಸಿಎಂ‌ ಸದನದಲ್ಲಿ ಹೇಳಿದ್ದಾರೆ. ಈಗ ಕಾದು ನೋಡಬೇಕಿದೆ ಅಷ್ಟೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!