ಹೈಕಮಾಂಡ್ ಭೇಟಿ ಸಹಜ, ಸತೀಶ್ ಜಾರಕಿಹೊಳಿ ಭೇಟಿಯಲ್ಲಿ ವಿಶೇಷ ಏನಿಲ್ಲ: ಸಚಿವ ಬೋಸರಾಜು

ಹೊಸದಿಗಂತ ಹಾವೇರಿ:

ನಾವೆಲ್ಲ ದೆಹಲಿಗೆ ಹೋದಾಗ ಇಲಾಖೆ ಕೆಲಸಗಳಿಗೆ ಕೇಂದ್ರ ಸರ್ಕಾರದವರನ್ನು ಭೇಟಿ ಆಗೋದು, ಹಾಗೆ ಪಕ್ಷದ ಹೈಕಮಾಂಡ್ ಭೇಟಿ ಮಾಡೊದು ಸಹಜ. ಅದರಂತೆ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಇಲಾಖೆ ಕೆಲಸಕ್ಕೆ ದೆಹಲಿಗೆ ಹೋಗಿದಾರೆ ಅಷ್ಟೇ. ಭೇಟಿಯಲ್ಲಿ ವಿಶೇಷ ಏನಿಲ್ಲ ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎನ್ ಎಸ್ ಭೋಸರಾಜು ಹೇಳಿದರು.

ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಆರ್ ವಿ ದೇಶಪಾಂಡೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ದೇಶಪಾಂಡೆ 9 ಬಾರಿ ಸಚಿವರಾದವರು
ಮೈಸೂರಿಗೆ ಕೆಲಸಕ್ಕೆ ಹೋದಾಗ ಮಾದ್ಯಮದವರು ಕೇಳಿದ್ದಕ್ಕೆ ಈಗಾಗಲೇ ಸಚಿವನಾಗಿದಿನಿ ಮುಂದೆ ಸಿದ್ದರಾಮಯ್ಯ ಒಪ್ಪಿದರೆ ಸಿಎಂ ಆಗಬಹುದು ಅಂತ ಜನರಲ್ ಆಗಿ ಹೇಳಿದಾರೆ ಅಷ್ಟೆ ಎಂದರು.

ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಾಯಕತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ. ಪಕ್ಷದ ಹೈಕಮಾಂಡ್ ಸಿದ್ದರಾಮಯ್ಯ ಪರ ನಿಂತಿದೆ. 5 ವರ್ಷ ಖಾಯಂ ಆಗಿ ಅವರೇ ಮುಂದೆ ವರೆಯುತ್ತಾರೆ. ಕಾಂಗ್ರೆಸ್ ಪಕ್ಷದವರಿಂದಲೇ ಸಿದ್ದರಾಮಯ್ಯ ಕೆಳಗಿಳಿಸೋ ವಿಚಾರ ನಮ್ಮವರಲ್ಲಿ ಇಲ್ಲ. ನೂರು ಸುಳ್ಳು ಹೇಳಿ ಬಿಜೆಪಿಯವರು ನಿಜ ಮಾಡೋಕೆ ಹೋಗ್ತಾರೆ. ಲೋಕಸಭಾ ಚುನಾವಣೆಯಲ್ಲಿ ನಾವು 1 ಸ್ಥಾನದಿಂದ 9 ಕ್ಕೆ ಹೋದೆವು ಹೀಗಾಗಿ ಮೋದಿ- ಅಮಿತ್ ಶಾಗೆ ಆತಂಕ‌ ಆಗಿದೆ. 400 ಸೀಟು ಗೆಲ್ತೀವಿ ಅಂತಿದ್ರು
ಆದರೆ ಬಿಜೆಪಿಯವರಿಗೆ 273 ಸೀಟು ಬಂದವು ಮೋದಿಯವರ ಪ್ರಭಾವ 8% ಇಳಿದಿದೆ. ರಾಹುಲ್ ಪ್ರಭಾವ ಶೇ.22ರಷ್ಟು ಹೆಚ್ಚಿದೆ ಎಂದು ಚಾಟಿ ಬೀಸಿದರು.

ನಮ್ಮ ಸರ್ಕಾರ ಆಡಳಿತ ಮಾಡಬಾರದು ಅಂತ ಬಿಜೆಪಿಯವರು ಅಲ್ಲಾಡಿಸೋ ಪ್ರಯತ್ನ ಮಾಡ್ತಾ ಇದಾರೆ. ನಮ್ಮ ಸರ್ಕಾರ ಅಲ್ಲಾಡಿಸೋಕೆ‌ ಸಾಧ್ಯವೇ ಇಲ್ಲ

ದೇವೆಗೌಡರು ಕುಮಾರಸ್ವಾಮಿ ಅಮಿತ್ ಶಾ ಜೊತೆ ಮೊದಲೇ ಮಾತಾಡಿಕೊಂಡು ಬಂದಿದ್ರು.
ಕೇಂದ್ರದಲ್ಲಿ ಅಧಿಕಾರಕ್ಕೆ ಬರ್ತೀವಿ, ಆ ಮೇಲೆ 6 ತಿಂಗಳೊಳಗೆ ಸಿದ್ದರಾಮಯ್ಯ ಸರ್ಕಾರ ತೆಗೆದುಹಾಕ್ತೀವಿ ,ಅದು ನಮ್ ಜವಾಬ್ದಾರಿ. ನಮಗೆಲ್ಲಾ ರಾಜಕಾರಣ ಗೊತ್ತಿದೆ ಎಂದು ತಂದೆ- ಮಗ ಅಮಿತ್ ಶಾ ಜೊತೆ ಮಾತಾಡಿಕೊಂಡು ಬಂದಿದಾರೆ. ನೂರಕ್ಕೆ ನೂರು ಪರ್ಸೆಂಟ್ ಬಿಜೆಪಿಯವರು ಆಪರೇಶನ್ ಶುರು ಮಾಡಿದಾರೆ ಎಂದು ಆರೋಪಿಸಿದರು.

ನಮ್ಮದೇ 9 ಜನ ಶಾಸಕರು ಸಿಎಂ, ಡಿಸಿಎಂ ಬಳಿ ಬಿಜೆಪಿಯವರು ನಮ್ಮನ್ನು ಟಚ್ ಮಾಡ್ತಿದಾರೆ ಎಂದು ಹೇಳಿದ್ದಾರೆ. ಆದರೆ ಅದು ಆಗಲಿಲ್ಲ, ಹೀಗಾಗಿ ಸಿಬಿಐ ಪ್ರಯೋಗ ಮಾಡಿದರು. ಇಡಿ ಪ್ರಯೋಗ ಮಾಡಿ ಸಿಎಂ ಹಾಗೂ ಡಿಕೆ ಶಿವಕುಮಾರ್ ಹೆಸರು ಸೇರಿಸೋಕೆ ಪ್ರಯತ್ನ ಮಾಡಿದರು. ಅದೂ ಆಗದೇ ಇದ್ದಾಗ ರಾಜಭವನ ದುರುಪಯೋಗ ಮಾಡಿಕೊಂಡು ಸರ್ಕಾರಕ್ಕೆ ಮಸಿ ಬಳಿಯೋ ಪ್ರಯತ್ನ ಮಾಡ್ತಿದಾರೆ ಎಂದರು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!