ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ಆರು ವಾರಗಳ ಕಾಲ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ಮುಂದುವರಿಸಲು ಕರ್ನಾಟಕ ಹೈಕೋರ್ಟ್ ಅನುವು ಮಾಡಿಕೊಟ್ಟಿದ್ದು, ಕಂಪನಿಗಳ ವಿರುದ್ಧಯಾವುದೇ ವ್ಯತಿರಿಕ್ತ ಕ್ರಮಗಳನ್ನು ಕೈಗೊಳ್ಳದಂತೆ ರಾಜ್ಯ ಸಾರಿಗೆ ಇಲಾಖೆಗೆ ನಿರ್ದೇಶನ ನೀಡಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ರ‍್ಯಾಪಿಡೊ, ಈ ನಿರ್ಧಾರದಿಂದ ತಕ್ಷಣ ಅಗತ್ಯ ಸಂಚಾರ ಸೇವೆಗಳು ಮುಂದುವರಿಯಲಿವೆ. ಎಲ್ಲಾ ಪಾಲುದಾರರಿಗೆ ಲಾಭದಾಯಕವಾಗುವಂತಹ ಸುಸ್ಥಿರ ಸಂಚಾರ ಪರಿಸರವನ್ನು ಒದಗಿಸಲು ಜನಪ್ರತಿನಿಧಿಗಳೊಂದಿಗೆ ನಾವು ಕೈಜೋಡಿಸಲು ಬದ್ಧರಾಗಿರುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ನಗರ ಪ್ರದೇಶದ ಸಂಚಾರದ ಸುಧಾರಣೆ ಮತ್ತು ಗಿಗ್ ಕೆಲಸಗಾರರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಪ್ರಗತಿಶೀಲ ನೀತಿಗಳನ್ನು ಅಳವಡಿಕೆಯಲ್ಲಿ ಕರ್ನಾಟಕ ಸರ್ಕಾರವು ಮುಂಚೂಣಿಯಲ್ಲಿದೆ. ದೇಶೀಯ ಬ್ರ್ಯಾಂಡ್ ಆಗಿ ನಾವು ಈ ಪ್ರಯತ್ನವನ್ನು ಶ್ಲಾಘಿಸುತ್ತೇವೆ ಎಂದು ಹೇಳಿದೆ.
ಮೋಟಾರು ವಾಹನ ಕಾಯ್ದೆ–1988ರ ಕಲಂ 93ರ ಅನುಸಾರ ರಾಜ್ಯ ಸರ್ಕಾರ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವ ತನಕ ಟ್ಯಾಕ್ಸಿ ಸೇವೆಯನ್ನು ಆರು ವಾರಗಳ ಒಳಗಾಗಿ ನಿರ್ಬಂಧಿಸಬೇಕು ಎಂದು ಹೈಕೋರ್ಟ್ ಇತ್ತೀಚೆಗೆ ಆದೇಶ ನೀಡಿತ್ತು.