ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ನಿರ್ಬಂಧ: ವಿಚಾರಣೆ ಮುಂದೂಡಿದ ಹೈಕೋರ್ಟ್

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಸರ್ಕಾರ ಅನುಮತಿ ನಿರ್ಬಂಧಿಸಿದ್ದು, ಈ ಹಿನ್ನೆಲೆ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ಕೋರಿದ್ದ ಮೇಲ್ಮನವಿ ಅರ್ಜಿಯನ್ನು ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಹಾಗೂ ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ನಡೆಯಿತು.

ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ಗಳ ಪರ ಹಿರಿಯವಕೀಲ ಧ್ಯಾನ್ ಚಿನ್ನಪ್ಪ ವಾದ ಮಂಡಿಸಿ, ಬೈಕ್ ಕೂಡಾ ಮೊಟಾರ್ ಕ್ಯಾಬ್ ಆಗಿರುವುದರಿಂದ ಅನುಮತಿ ನೀಡಬೇಕು. ಮೋಟಾರ್ ಕ್ಯಾಬ್ ಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಅವಕಾಶವಿದೆ. ರಾಜ್ಯಸರ್ಕಾರ ಬೈಕ್ ಟ್ಯಾಕ್ಸಿಗಳನ್ನು ನಿರ್ಬಂಧಿಸುವಂತಿಲ್ಲ. ಬೈಕ್ ಅನ್ನು ಸಂಚಾರಿ ವಾಹನವಾಗಿ ನೋಂದಾಯಿಸಬಹುದು. ಲಕ್ಷಾಂತರ ಜನರಿಗೆ ಬೈಕ್ ಟ್ಯಾಕ್ಸಿ ಉದ್ಯೋಗ ಒದಗಿಸಿದೆ. ಲಕ್ಷಾಂತರ ಜನರು ಬೈಕ್ ಟ್ಯಾಕ್ಸಿ ಸೇವೆ ಬಯಸುತ್ತಿದ್ದಾರೆ.ಜನರ ಸಂಚಾರವನ್ನು ಸರ್ಕಾರ ತಡೆಹಿಡಿಯಲಾಗದು. ಅಗ್ಗವಾದ, ಸುಲಭವಾದ ವ್ಯವಸ್ಥೆಯನ್ನು ಜನ ಬಯಸುತ್ತಾರೆ. ಈಗಾಗಲೇ 22 ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿಗೆ ಅನುಮತಿ ಇದೆ ಎಂದು ವಾದ ಮಂಡಿಸಿದರು.

ಬೈಕ್ ಟ್ಯಾಕ್ಸಿ ಪರ ವಕೀಲರ ವಾದಕ್ಕೆ ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿ, 11 ರಾಜ್ಯಗಳಲ್ಲಿ ಮಾತ್ರ ಸೀಮಿತ ಸಂಖ್ಯೆ ಬೈಕ್‌ಗಳಿಗೆ ಅವಕಾಶ ನೀಡಲಾಗಿದೆ. ಬೈಕ್ ಟ್ಯಾಕ್ಸಿಯಾಗಿ ಸಂಚರಿಸಲು ಅನುಮತಿ ನೀಡಿಲ್ಲವೆಂದು ವಾದ ಮಂಡಿಸಿದರು.

ಆದರೆ, ಮೇಲ್ಮನವಿ ಅರ್ಜಿಗಳ ಆಕ್ಷೇಪಣೆಗೆ ಅವಕಾಶ ಮಾಡಿಕೊಡುವ ಹಿನ್ನೆಲೆಯಲ್ಲಿ ವಿಚಾರಣೆ ನಾಳೆಗೆ ಮುಂದೂಡಿಕೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!