ಸಹಸ್ರಾರು ಗ್ರಾಮಸ್ಥರ ಸಹಕಾರದಿಂದ ಕರಿಯಕಲ್ಲು ರುದ್ರಭೂಮಿಗೆ ಹೈ-ಟೆಕ್ ಸ್ಪರ್ಶ

ಗಣೇಶ್ ನಾಯಕ್, ಸಾಣೂರು

ಕಾರ್ಕಳ: ಸಮಾಜದ ಹಿರಿಯರು ಹಾಗೂ ಗ್ರಾಮಸ್ಥರ ಸಹಕಾರದಿಂದ ಶ್ರಮದಾನ ಮಾಡುವ ಮೂಲಕ ಸ್ಮಶಾನ ಭೂಮಿಯನ್ನು ಹೈಟೆಕ್-ರುದ್ರ ಭೂಮಿಯಾಗಿ ನಂದನ ವನದಂತೆ ನಿರ್ಮಾಣ ಗೊಳಿಸಿದ್ದಾರೆ.

ಹೌದು.. ಇದು ಕಾರ್ಕಳ ಪುರಸಭೆ ವ್ಯಾಪ್ತಿಯ ಕರಿಯಕಲ್ಲು ಸಾರ್ವಜನಿಕ ಹಿಂದೂ ರುದ್ರಭೂಮಿ, ಆಧುನಿಕ ಸ್ಪರ್ಶದೊಂದಿಗೆ ಸಕಲ ಸೌಲಭ್ಯಗಳನ್ನೊಳಗೊಂಡಿದ್ದು, ದಿನದ 24 ಗಂಟೆಯೂ ಶವ ಸಂಸ್ಕಾರ ನಡೆಸಲು ವ್ಯವಸ್ಥೆ ಇಲ್ಲಿ ಇದೆ.

1998ರಲ್ಲಿ ಯುವಶಕ್ತಿ ಯುತ್ ಕ್ಲಬ್ ಮತ್ತು ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಅವರೊಂದಿಗೆ ಅಭಿವೃದ್ದಿಗೊಂಡ ಈ ರುಧ್ರಭೂಮಿಯು ಪುರಸಭೆ ಸದಸ್ಯರಾದ ಪ್ರದೀಪ್ ಕೊಟ್ಯಾನ್, ರವೀಂದ್ರ ಬಂಗೇರ ಮುತುವರ್ಜಿಯಲ್ಲಿ ಹಾಗೂ ಅಂದಿನ ಸಂಸದ ದಿ.ಶ್ರೀಕಂಠಪ್ಪ ಅವರು ನವೀಕರಣಗೊಂಡ ಈ ರುಧ್ರಭೂಮಿಯನ್ನು ಲೋಕಾರ್ಪಣೆ ಮಾಡಿದ್ದರು.

ಕೋರೋನ ಸಂದರ್ಭದಲ್ಲಿ ಅಭಿವೃಧ್ಧಿ:
ಕೋರೋನ ಸಂದರ್ಭ ಕ್ಷೇತ್ರದ ಶಾಸಕ ವಿ.ಸುನಿಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪಾಳು ಬಿದ್ದ ರುಧ್ರಭೂಮಿಯನ್ನು ಅಭಿವೃದ್ಧಿ ಮಾಡಬೇಕು ಎಂಬ ಸಲಹೆಯ ಹಿನ್ನಲೆಯಲ್ಲಿ ಮತ್ತೆ ಅಭಿವೃಧಿಗೆ ಚಾಲನೆ ನೀಡಲಾಗಿತ್ತು.

90 ಸೆಂಟ್ಸ್ ಹೊಂದಿರುವ ಈ ರುದ್ರಭೂಮಿ ಹಸಿರಿನಿಂದ ನಳನಳಿಸುತ್ತಿದೆ. ವೈವಿಧ್ಯಮಯ ಸಸ್ಯಗಳನ್ನು ಇಲ್ಲಿ ಬೆಳೆಸಲಾಗಿದೆ. ಈ ಜಾಗದಲ್ಲಿ ವಿವಿಧ ಜಾತಿಯ 27 ಫಲ ಬರುವ ಗೀಡಗಳು ನೆಟ್ಟು, ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗುವಂತೆ ನೋಡಿಕೊಳ್ಳಲಾಗುತ್ತಿದೆ.

ಕೋವಿಡ್-19 ಶವ ಸಂಸ್ಕಾರಕ್ಕಿದ್ದ ತಾಲೂಕಿನಲ್ಲಿ ಏಕೈಕ ಸ್ಮಶಾನ..!
ಕೊರೊನಾ ಹಿನ್ನೆಲೆಯಲ್ಲಿ ಮೃತಪಟ್ಟವರ ಶವವನ್ನು ಕೂಡಾ ಅಧಿಕಾರಿಗಳ ವಿನಂತಿ ಮೇರೆಗೆ ಈ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಸರಕಾರದೊಂದಿಗೆ ಸಾಥ್ ನೀಡುವ ಮೂಲಕ ಎಲ್ಲರ ಶ್ಲಾಘನೆಗೆ ಪಾತ್ರವಾಗಿತ್ತು.

ವ್ಯವಸ್ಥಾಪನ ಸಮಿತಿ:
ಪುರಸಭೆಯ ಸೊತ್ತು ಇದಾಗಿದ್ದು, ರುಧ್ರಭೂಮಿ ವ್ಯವಸ್ಥಾಪನ ಸಮಿತಿ ರಚನೆ ಮಾಡಿ ನಿರ್ವಹಣೆಮಾಡಿಕೊಂಡು ಬರುತ್ತಿದೆ. 9 ಸಮಾಜದ 16 ಮಂದಿ ಸಮಿತಿಯಲ್ಲಿ ಶಾಸಕರು, ಜನಪ್ರತಿನಿಧಿಗಳು, ಮುಖ್ಯಾಧಿಕಾರಿಗಳು ಹಾಗೂ ಸ್ವಯಂಸೇವಕರನ್ನೊಳಗೊಂಡ ಪ್ರತ್ಯೇಕ ಸಮಿತಿ ರಚನೆ ಮಾಡಿ, ಈಗ ರುದ್ರಭೂಮಿಯ ಮೇಲ್ವಿಚಾರಣೆಯನ್ನು ಪುರಸಭೆ ಮಾಜಿ ಸದಸ್ಯ ಪ್ರಕಾಶ್ ರಾವ್ ನೋಡಿಕೊಳ್ಳುತ್ತಿದ್ದಾರೆ. ರುದ್ರಭೂಮಿಯ ಗೋಡೆಯಲ್ಲಿ ಸಂಪರ್ಕಿಸಬೇಕಾದವರ ಮೊಬೈಲ್ ನಂಬರ್ ಅಳವಡಿಸಲಾಗಿದೆ. ಶವಸಂಸ್ಕಾರಕ್ಕೆ ಆಗಮಿಸುವ ಜನತೆಯನ್ನು ಮನೆಗೆ ತಲುಪಿಸುವಲ್ಲಿ ಹಾಗೂ ಅನಿವಾರ್ಯ ಪರಿಸ್ಥಿತಿಯಲ್ಲಿ ವಾಹನದ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿದೆ.

ಸ್ಥಳೀಯ ಗ್ರಾಮಕ್ಕೂ ಅನುಕೂಲ:
ಪುರಸಭೆ ವ್ಯಾಪ್ತಿ ಮಾತ್ರವಲ್ಲದೆ ಸುತ್ತಮತ್ತದ ಗ್ರಾಮೀಣ ಪ್ರದೇಶಗಳಾದ ರೆಂಜಾಳ, ಬೋರ್‌ಕಟ್ಟೆ, ಮಿಯ್ಯಾರು, ತೆಳ್ಳಾರು, ದುರ್ಗ, ನಿಟ್ಟೆ, ಇರ್ವತ್ತೂರು, ಕುಕ್ಕೂಂದೂರು, ಬಾರಾಡಿ ಮತ್ತು ಸಾಣೂರು ಮುಂತಾದೆಡೆಗಳಿಂದಲೂ ಶವ ಸಂಸ್ಕಾರಕ್ಕಾಗಿ ಇಲ್ಲಿಗಾಗಮಿಸುತ್ತಿದ್ದಾರೆ.

ಅನುದಾನ:
ಶಾಸಕರ ಅನುದಾನ, ಪುರಸಭೆಯ ಅನುದಾನ, ವಿಧಾನ ಪರಿಷತ್ ಸದಸ್ಯರ ಅನುದಾನ, ಸಾರ್ವಜನಿಕರು, ಸ್ಥಳೀಯ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ರೋಕ್ ಸಿಟಿ, ತಮಿಳು ಸಮಾಜ, ಸಂಘ ಸಂಸ್ಥೆಗಳ ಸಹಕಾರದಿಂದ ಅಭಿವೃದ್ಧಿಯಾಗಿದೆ.
ವ್ಯವಸ್ಥೆಗಳು ಇಲ್ಲಿ ಇವೆ:
* ಸ್ವಚ್ಚತೆಗೆ ಮೊದಲ ಆದ್ಯತೆ. ಸುಣ್ಣ-ಬಣ್ಣ ಬಳಿದು ಆಧುನಿಕ ಸ್ಪರ್ಶ.
* ಶವ ಸಂಸ್ಕಾರದ ಜಾಗಕ್ಕೆ ತಗಡುಶೀಟಿನ ಚಪ್ಪರ
* 24 ಗಂಟೆಯೂ ಒಂದು ಸಮಯದಲ್ಲಿ 3 ಶವ ಸಂಸ್ಕಾರಕ್ಕೆ ವ್ಯವಸ್ಥೆ
* ಕಟ್ಟಿಗೆ ದಾಸ್ತಾನು ಕೊಠಡಿ.
* ಜನತೆಗೆ ತಂಗುವ ಕೊಠಡಿ, ಕಛೇರಿ.
* ರಾತ್ರಿ ಬೆಳಕಿಗೆ ಸೋಲಾರ್ ಮತ್ತು ವಿದ್ಯುತ್ ದೀಪ
* ದಹನದ ಬೂದಿ ಹಾಕಲು ಪ್ರತ್ಯೇಕ ಫಿಟ್ ವ್ಯವಸ್ಥೆ.
* ಅಂಬುಲೆನ್ಸ್ ವ್ಯವಸ್ಥೆ
* ಮೃತ ದೇಹ ಇಡುವ ಪ್ರೀಜರ್ ವ್ಯವಸ್ಥೆ.
* ಸಿಸಿ ಕ್ಯಾಮೆರ ಅಳವಡಿಕೆ.
ಕರಿಯಕಲ್ಲು ಹಿಂದೂ ರುದ್ರಭೂಮಿ ಮಾದರಿಯಾಗಿ ರೂಪುಗೊಂಡಿದ್ದು, ಈಗ ಎಲ್ಲರೂ ಮೆಚ್ಚುಗೆ ಸೂಚಿಸುವ ಮಟ್ಟಕ್ಕೆ ಬೆಳೆದುನಿಂತಿದೆ.

ಅನುದಾನ ಬೇಕು:
ಕಟ್ಟಿಗೆ ದಾಸ್ತಾನು ಕೊಠಡಿ ವಿಸ್ತರಣೆ, ತರೆದ ಬಾವಿ ಹಾಗೂ ರುದ್ರಭೂಮಿಯ ಇತರ ಅಭಿವೃದ್ಧಿಗೆ ದಾನಿಗಳ ಸಹಕಾರವನ್ನು ಕೂಡಾ ಅಪೇಕ್ಷಿಸಿದ್ದೇವೆ. ಅಲ್ಲಿಗಾಗಮಿಸುವ ಶವ ಸಂಸ್ಕಾರಕ್ಕೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಿದ್ಯುತ್ ಶವಗಾರ ನಿರ್ಮಾಣಕ್ಕಾಗಿ ವ್ಯವಸ್ಥಾಪನ ಸಂಚಾಲಕ ಪ್ರಕಾಶ್ ರಾವ್ ಅವರು ಸಂಘ-ಸಂಸ್ಥೆ, ಸರಕಾರಕ್ಕೆ ಮನವಿ ನೀಡಲಾಗುವುದು ಎಂದಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!