ಹೊಸದಿಗಂತ ವರದಿ, ಹುಬ್ಬಳ್ಳಿ:
ಕಾಂಗ್ರೆಸ್ ದುರಾಡಳಿತದಿಂದ ಭಾರತ ಪ್ರಗತಿಯಾಗಿಲ್ಲ. ಇವರ ಅವಧಿಯಲ್ಲಿಯೇ ಅತೀ ಹೆಚ್ಚು ದೇಶದ ಸಾಲವಾಗಿದೆ. ಈಗ ಪ್ರಧಾನಿ ಮೋದಿ ಅವರು ಸಾಲವನ್ನು ತಿರಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು, ದೇಶ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ, ಸಾಲದ ಸುಳಿಯಲ್ಲಿದೆ ಎಂಬ ಹೇಳಿಕೆ ಮಂಗಳವಾರ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದರು.
೭೦ ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಯಾರಿಗೆ ಹುಚ್ಚು ಹಿಡಿಸಿದ್ದಾರೆ ಎಂಬುವುದು ದೇಶದ ಜನರಿಗೆ ಗೊತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿರುವುದಾಗಿ, ಗರಿಬಿ ಹಟಾವೋ ಮಾಡುತ್ತೇವೆ ಎಂದು ಕಾಂಗ್ರೆಸ್ ಆಡಳಿತ ನಡೆಸಿತು ಎಂದು ಹರಿಹಾಯ್ದರು.
ರಾಮಮಂದಿರ ನಿರ್ಮಾಣದಿಂದ ಬಡತನ ನಿರ್ಮೂಲನೆ ಆಗುತ್ತದೆ ಎನ್ನುವ ಸಂತೋಷ ಲಾಡ್ ಅವರು, ಗರಿಬಿ ಹಟಾವೋ ದಿಂದ ದೇಶದಲ್ಲಿ ಎಷ್ಟು ಜನರು ಬಡತನದಿಂದ ಹೊರಬಂದಿದ್ದಾರೆ?, ನಿಮಗೆ ರಾಮ ಮಂದಿರ ನಿರ್ಮಾಣ ಮಾಡಲು ಆಗಿಲ್ಲ. ಇನ್ನೂ ಬಡತನ ನಿರ್ಮೂಲನೆ ಸಹ ಮಾಡಿಲ್ಲ ಎಂದರು.
ರಾಮಮಂದಿರ ನಿರ್ಮಾಣ ಜಾಗ ಸೂಕ್ತವಲ್ಲ ಎನ್ನುವರ ನೀವು ಸುಪ್ರೀಂ ಕೋರ್ಟ್‌ನಲ್ಲಿ ಯಾಕೇ ಅರ್ಜಿ ಸಲ್ಲಿಸಲಿಲ್ಲ. ಇಂತಹ ಹೇಳಿಕೆ ನೀಡುವ ಮೂಲಕ ಜನರ ದಾರಿತಪ್ಪಿಸಲಾಗದು. ಕಾಂಗ್ರೆಸ್ ಅಧಿಕಾರ ಬಿಟ್ಟಾಗ ದೇಶ ಆರ್ಥಿಕವಾಗಿ ೧೦ ನೇ ಸ್ಥಾನದಲ್ಲಿತ್ತು. ಕಳೆದ ೧೦ ವರ್ಷದಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಇನ್ನೂ ಎರಡು ವರ್ಷದಲ್ಲಿ ಮೂರನೇ ಸ್ಥಾನಕ್ಕೆ ಬರುತ್ತದೆ ಎಂದು ಹೇಳಿದರು.