Saturday, July 2, 2022

Latest Posts

ಫ್ರಾನ್ಸ್​ನಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಬ್ಯಾನ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಕರ್ನಾಟಕದಲ್ಲಿ ಭಾರೀ ಸದ್ದು ಮಾಡಿದ್ದ ಹಿಜಾಬ್ ವಿವಾದ ಇದೀಗ ಫ್ರಾನ್ಸ್​ನಲ್ಲಿ ಕೂಡ ಚರ್ಚೆಗೆ ಗ್ರಾಸವಾಗಿದೆ.
ಫ್ರಾನ್ಸ್​ನಲ್ಲಿ ಹಿಜಾಬ್​ ಚರ್ಚೆಗಳು ಶುರುವಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್​ ಬ್ಯಾನ್​ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿವೆ. ಇನ್ನು ಫ್ರಾನ್ಸ್​ನ ಬಲಪಂಥೀಯ ಅಧ್ಯಕ್ಷೀಯ ಅಭ್ಯರ್ಥಿ ಮರೀನ್ ಲೆ ಪೆನ್ ಸಾರ್ವಜನಿಕವಾಗಿ ಹಿಜಾಬ್ಧರಿಸುವ ಮುಸ್ಲಿಮರಿಗೆ ದಂಡ ವಿಧಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಫ್ರಾನ್ಸ್​ನಲ್ಲಿ ಚುನಾವಣೆ ಅಖಾಡದಲ್ಲಿ ಕೊನೆಯ ಹಂತದ ಪ್ರಚಾರ ನಡೆಯುತ್ತಿದ್ದು, ಫ್ರಾನ್ಸ್​ನ ಬಲಪಂಥೀಯ ಅಧ್ಯಕ್ಷೀಯ ಅಭ್ಯರ್ಥಿ ಮರೀನ್ ಲೆ ಪೆನ್ , ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ನಿಷೇಧಿಸುವ ನನ್ನ ಪ್ರತಿಜ್ಞೆಯನ್ನು ಕಾರ್ಯಗತಗೊಳಿಸಲಾಗುವುದು. ಕಾರ್‌ಗಳಲ್ಲಿ ಸೀಟ್‌ಬೆಲ್ಟ್ ಧರಿಸುವ ರೀತಿಯಲ್ಲಿಯೇ ರಸ್ತೆಗಳಲ್ಲಿ ಹಿಜಾಬ್ ಧರಿಸುವ ವಿಚಾರದಲ್ಲಿಯೂ ಪೊಲೀಸರು ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಮಾಡಲಾಗುವುದು. ಪೊಲೀಸರ ಮೂಲಕವೇ ಈ ಆದೇಶವನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಯಾವ ರೀತಿ ನಿಮ್ಮ ಸೀಟ್ ಬೆಲ್ಟ್ ಧರಿಸದಿರುವುದು ಕಾನೂನುಬಾಹಿರ, ಅದಕ್ಕೆ ದಂಡವನ್ನು ವಿಧಿಸಲಾಗುತ್ತದೆ. ಅದೇ ರೀತಿಯಲ್ಲಿ ಮುಸ್ಲಿಮರು ಶಿರಸ್ತ್ರಾಣ ಧರಿಸದಂತೆಯೂ ಪೊಲೀಸರೇ ಎಚ್ಚರ ವಹಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ಎರಡನೇ ಸುತ್ತಿನ ಚುನಾವಣೆಯನ್ನು ಏಪ್ರಿಲ್ 24 ರಂದು ನಿಗದಿಪಡಿಸಲಾಗಿದೆ. ಫ್ರಾನ್ಸ್​ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಈ ಬಾರಿಯೂ ಗೆಲ್ಲುವ ಸಾಧ್ಯತೆಯಿದ್ದರೂ ಅಂತಿಮ ಹಂತದಲ್ಲಿ ಲೆ ಪೆನ್ ಭಾರೀ ಪೈಪೋಟಿ ನೀಡುವ ಸಾಧ್ಯತೆಯಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss