ಹಿಜಾಬ್ ವಿವಾದ: ಅರ್ಜಿಯ ವಿಚಾರಣೆ ನಾಳೆಗೆ ಮುಂದೂಡಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹಿಜಾಬ್ ವಿವಾದ ಕುರಿತು 8ನೇ ದಿನವಾದ ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ತ್ರಿಸದಸ್ಯ ಪೀಠ , ಮತ್ತೆ ಅರ್ಜಿಯ ವಿಚಾರಣೆಯನ್ನು ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿಕೆ ಮಾಡಿದೆ.
ತ್ರಿಸದಸ್ಯ ಪೂರ್ಣ ಪೀಠದ ಮುಂದೆ ಇಂದು ಕೂಡ ಅಡ್ವಕೇಟ್ ಜನರಲ್ ಸರ್ಕಾರದ ಪರ ವಾದವನ್ನು ಮಂಡಿಸಿದರು.
ಈ ಬಳಿಕ ಮಧ್ಯಂತರ ಆದೇಶದ ಸ್ಪಷ್ಟೀಕರಣಗಳನ್ನು ಕೋರುವ ಅರ್ಜಿಗಳನ್ನು ನಾಳೆ ತೆಗೆದುಕೊಳ್ಳುವುದಾಗಿ ಪೀಠ ಹೇಳಿತು. ಈ ಮೂಲಕ ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿಕೆ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!