ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತ್ರಿಸದಸ್ಯ ಪೀಠ ವಿಚಾರಣೆಯನ್ನು ನಾಳೆಗೆ ಮುಂದೂಡಿಕೆ ಮಾಡಿದೆ.
ಶುಕ್ರವಾರ ಮುಖ್ಯನ್ಯಾಯಾಮೂರ್ತಿಗಳನ್ನು ಒಳಗೊಂಡ ತ್ರಿಸದಸ್ಯ ಪೀಠ ಮೌಖಿಕ ಆದೇಶವನ್ನು ನೀಡಿ, ಇಂದು ಅರ್ಜಿ ವಿಚಾರಣೆಯನ್ನು ನಡೆಸುವುದಾಗಿ ಹೇಳಿದ್ದ ಪೀಠ, ಇಂದು ಅರ್ಜಿ ಪರ ಹಾಗೂ ವಿರೋಧ ವಕೀಲರ ವಾದ-ವಿವಾದವನ್ನು ಆಲಿಸಿದರು. ಅಂತಿಮವಾಗಿ ನ್ಯಾಯಾಪೀಠ ನಾಳೆ ಮಧ್ಯಾಹ್ನ 2:30ಕ್ಕೆ ವಿಚಾರಣೆ ಮುಂದೂಡಿದೆ.