ಹಿಜಾಬ್ ವಿವಾದ: ಉಡುಪಿಯಲ್ಲಿ ನಡೆಯಿತು ಸರ್ವ ಸಂಘಟನೆಯ ಮುಖಂಡರ ಶಾಂತಿ ಸಭೆ

ಹೊಸದಿಗಂತ ವರದಿ, ಉಡುಪಿ:

ಉಡುಪಿ ನಗರ ಠಾಣೆ ಮತ್ತು ಮಲ್ಪೆ ಠಾಣಾ ವ್ಯಾಪ್ತಿಯ ಎಲ್ಲಾ ಸಂಘಟನೆಯ ಮುಖಂಡರ ಶಾಂತಿ ಸಭೆಯು ಭಾನುವಾರ ಸಂಜೆ ನಗರದ ತಾಲೂಕು ಆಫೀಸಿನಲ್ಲಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಅವರ ನೇತೃತ್ವದಲ್ಲಿ ನಡೆಯಿತು

ಹಿಜಾಬ್ ವಿವಾದ ಭುಗಿಲೆದ್ದು ಹೈಕೋರ್ಟ್ ನೀಡಿದ ಮಧ್ಯಂತರ ಆದೇಶದ ಬಳಿಕ ಸೋಮವಾರದಿಂದ ಹೈಸ್ಕೂಲ್ ಗಳು ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ಧರ್ಮದ, ಪಕ್ಷದ ಪ್ರಮುಖರು ಮತ್ತು ಸಂಘಟನೆಯ ಪ್ರಮುಖರ ಶಾಂತಿ ಸಭೆ ನಡೆಯಿತು

ಸಭೆಯಲ್ಲಿ ಉಡುಪಿ ಡಿವೈಎಸ್ಪಿ ಸುಧಾಕರ್ ನಾಯ್ಕ್, ಉಡುಪಿ ನಗರ ಠಾಣಾ ವೃತ್ತ ನಿರೀಕ್ಷಕ ಪ್ರಮೋದ್ ಕುಮಾರ್, ಮಲ್ಪೆ ಠಾಣಾ ವೃತ್ತ ನಿರೀಕ್ಷಕ ಶರಣಗೌಡ, ಉಡುಪಿ ಬಾಲಕಿಯರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಯಶ್ಪಾಲ್ ಸುವರ್ಣ, ಬಿಜೆಪಿ ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ವಿಜಯ್ ಕೊಡವೂರು, ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್,‌ ಹಿಂದೂ ಜಾಗರಣ ವೇದಿಕೆ ಮುಖಂಡರು, ಎಬಿವಿಪಿ ಮುಖಂಡರು,‌ ಸಮಾಜ ಸೇವಕ ನಿತ್ಯಾನಂದ ವಳಕಾಡು, ಎಸ್‌.ಡಿ.ಪಿ.ಐ ಮುಖಂಡರು, ಮುಸ್ಲಿಂ ಒಕ್ಕೂಟ, ಪರ್ಯಾಯ ಕೃಷ್ಣಾಪುರ ಮಠದ ದಿವಾನರು, ಕ್ರೈಸ್ತ ಧರ್ಮ ಗುರುಗಳು ಉಪಸ್ಥಿತರಿದ್ದರು

ಸಭೆಯ ನಂತರ ಮಾತನಾಡಿದ ಉಡುಪಿ ಶಾಸಕ ರಘುಪತಿ ಭಟ್ ಉಡುಪಿ ತಾಲೂಕಿನ ಶಾಂತಿ‌ ಸಭೆ ನಡೆಸಿದ್ದು, ನ್ಯಾಯಾಲಯದ ಆದೇಶವನ್ನು ಒಮ್ಮತದಿಂದ ಪಾಲಿಸಿತ್ತೇವೆ ಎಂದು ತೀರ್ಮಾನಕ್ಕೆ ಬರಲಾಗಿದೆ. ಸಮವಸ್ತ್ರ ಇಲ್ಲದ ಕಾಲೇಜ್ ನಲ್ಲಿ ವಿದ್ಯಾರ್ಥಿಗಳು ಹಿಂದೆ ಹಿಜಾಬ್ ಧರಿಸಿ ಬರುತ್ತಿದ್ದರೆ ಅದಕ್ಕೆ ಅವಕಾಶ ಇದೆ. ಆದರೆ ಸಮವಸ್ತ್ರ ಇರುವ ಕಾಲೇಜಿನಲ್ಲಿ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕು ಎಂದು ತೀರ್ಮಾನಿಸಿದ್ದೇವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!