Monday, October 2, 2023

Latest Posts

ಮಧ್ಯಪ್ರದೇಶದ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿನಿಯರಿಗೆ ಹಿಜಾಬ್: ತನಿಖೆಗೆ ಆದೇಶಿಸಿದ ಸಿಎಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ಶಾಲೆಯೊಂದರಲ್ಲಿ ಹಿಂದೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿರುವ ಫೋಟೊಗಳು ಎಲ್ಲೆಡೆ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ದಾಮೋಹ್ ಜಿಲ್ಲೆಯ ಶಾಲೆಯೊಂದರಲ್ಲಿ ಫಲಿತಾಂಶದ ಬೋರ್ಡ್ ಹಾಕಿದ್ದು, ಇದರಲ್ಲಿ ಎಲ್ಲರೂ ಹಿಜಾಬ್ ಧರಿಸಿದ್ದಾರೆ. ಲಕ್ಷ್ಮಿ ಹೆಸರಿನ ವಿದ್ಯಾರ್ಥಿನಿಯೂ ಹಿಜಾಬ್ ಧರಿಸಿದ್ದು, ವಿವಾದಕ್ಕೆ ಕಾರಣವಾಗಿದೆ.

ಶಾಲಾ ಆಡಳಿತ ಮಂಡಳಿ ಬೋರ್ಡ್‌ನಲ್ಲಿ ಬರೀ ಮುಸ್ಲಿಮರ ಫೋಟೊ ಹಾಕಿದಂತೆ ಕಾಣಲಿ, ಮುಸ್ಲಿಮರು ಟಾಪರ‍್ಸ್ ಎಂಬರ್ಥದಲ್ಲಿ ಹಿಂದೂ ವಿದ್ಯಾರ್ಥಿನಿಯರಿಗೂ ಒತ್ತಾಯಪೂರ್ವಕವಾಗಿ ಹಿಜಾಬ್ ಧರಿಸಲು ಹೇಳಿದೆ ಎಂದು ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಎಬಿವಿಪಿ ಸಂಘಟನೆಗಳು ಆರೋಪಿಸಿವೆ.

ಶಾಲೆಯ ಆಡಳಿತ ಮಂಡಳಿ ಇದು ಹಿಜಾಬ್ ಅಲ್ಲ, ಸ್ಕಾರ್ಫ್ ಅಷ್ಟೆ, ನಮ್ಮ ಶಾಲೆಯ ಡ್ರೆಸ್‌ಕೋಡ್‌ನ ಭಾಗ ಇದು ಎಂದು ಹೇಳಿದ್ದಾರೆ. ಈ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಲೇ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ತನಿಖೆಗೆ ಆದೇಶಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!