ಹೊಸದಿಗಂತ ವರದಿ, ಕಲಬುರಗಿ:
ಹೈಕೋರ್ಟ್ ಮಧ್ಯಂತರ ಆದೇಶವಿದ್ದರೂ, ಹಿಜಾಬ್ ಧರಿಸಿಯೇ ವಿಧ್ಯಾಥಿ೯ನಿಯರು ಪಾಠ ಕೇಳಿರುವಂಥಹ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಉದು೯ ಪ್ರೌಢ ಶಾಲೆಯಲ್ಲಿ ಸೋಮವಾರ ಬೆಳಿಗ್ಗೆ 10ನೇ ತರಗತಿಯ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಶಾಲೆಗೆ ಆಗಮಿಸಿದ್ದಲ್ಲದೇ,ತರಗತಿಯೊಳಗೆ ಹಿಜಾಬ್ ಧರಿಸಿಯೇ,ಪಾಠವನ್ನು ಕೇಳಿದ್ದಾರೆ.
ಅದೇ ರೀತಿ ಶಿಕ್ಷಕರು ಸಹ ಹೈಕೋರ್ಟ್ ,ನ ಆದೇಶವನ್ನು ಉಲ್ಲಂಘನೆ ಮಾಡಿ, ಹಿಜಾಬ್ ಧಾರಣೆ ಮಾಡಿಕೊಂಡೆ ಮಕ್ಕಳಿಗೆ ಪಾಠವನ್ನು ಮಾಡಿದ್ದಾರೆ.
ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಣ ಇಲಾಖೆ ಹೈಕೋರ್ಟ್ ಆದೇಶಕ್ಕೆ ಕವಡೆ ಕಾಸಿನ ಕಿಮತ ಕೊಡದೇ ವತಿ೯ಸಿದ್ದು, ಪೋಲಿಸರು ಇದ್ದರೂ ಸಹ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮಾತ್ರ ಡೊಂಟ್ ಕೆರ ಎಂದಿದ್ದಾರೆ.