ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಹಿಜಾಬ್ ವಿವಾದದ ನಡುವೆಯೇ ಇಂದಿನಿಂದ 9 ಹಾಗೂ 10 ತರಗತಿ ಶಾಲೆಗಳು ಆರಂಭವಾಗಿವೆ. ಕೆಲವೆಡೆ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕಿದ್ದಾರೆ. ಶಿವಮೊಗ್ಗದ ಶಾಲೆಯೊಂದರಲ್ಲಿ ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಯುತ್ತಿದ್ದು, ಹಿಜಾಬ್ ಧರಿಸಿ ಬಂದ ಕೆಲ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ಪರೀಕ್ಷೆ ಬರೆಯಲು ನಿರಾಕರಿಸಿದ್ದಾರೆ.
ಹಿಜಾಬ್ ತೆಗೆದು ಪರೀಕ್ಷೆ ಬರೆಯಿರಿ ಎಂದು ಶಿಕ್ಷಕರು ತಿಳಿಸಿದ್ದು, ವಿದ್ಯಾರ್ಥಿನಿಯರು ಇದಕ್ಕೆ ಒಪ್ಪದೇ ಪರೀಕ್ಷೆ ಬಿಡುತ್ತೇವೆ, ಹಿಜಾಬ್ ತೆಗೆಯುವುದಿಲ್ಲ ಎಂದು ವಾಪಾಸಾಗಿದ್ದಾರೆ. ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಶಾಲೆ ಸಿಬ್ಬಂದಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಕಡೆಗೂ ಅನುಮತಿ ನೀಡದೇ ಇದ್ದರಿಂದ ವಿದ್ಯಾರ್ಥಿನಿಯರು ವಾಪಾಸಾಗಿದ್ದಾರೆ.