ಹೊಸದಿಗಂತ ವರದಿ, ಅಂಕೋಲಾ:
ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿದು ಕಣ್ಮರೆಯಾದ ಮನೆ ಮಂದಿಯನ್ನು ಅವರು ಸಾಕಿದ ಶ್ವಾನ ಹುಡುಕುತ್ತಿರುವುದು ಸ್ಥಳದಲ್ಲಿ ಜಮಾಯಿಸಿದವರ ಕರಳು ಹಿಂಡುವಂತಿತ್ತು.
ಗಂಗಾವಳಿ ನದಿ ತೀರದಲ್ಲಿ ಚಹಾ,ತಿಂಡಿ ಅಂಗಡಿ ಇಟ್ಟು ಜೀವನ ನಿರ್ವಹಣೆ ಮಾಡುತ್ತಿದ್ದ ಲಕ್ಷ್ಮಣ ನಾಯ್ಕ ಮತ್ತು ಅವರ ಕುಟುಂಬದ ನಾಲ್ವರು ಗುಡ್ಡ ಕುಸಿತದಿಂದಾಗಿ ಕಣ್ಮರೆಯಾಗಿದ್ದು ಅಂಗಡಿ ಬಳಿ ಇರುತ್ತಿದ್ದ ಅವರು ಸಾಕಿದ ನಾಯಿ ಅಪಾಯದಿಂದ ಪಾರಾಗಿದೆ.
ಸಾಕಿದ ಒಡೆಯ ಮತ್ತು ಮನೆಯವರು ದುರಂತಕ್ಕೆ ಸಿಲುಕಿದ್ದು ಮೂಕ ಪ್ರಾಣಿಯ ಅರಿವಿಗೆ ಬಂದಿದ್ದರಿಂದಲೋ ಏನೋ ಸುರಿಯುವ ಮಳೆಯಲ್ಲಿ ಒದ್ದೆಯಾಗಿ ಘಟನೆ ನಡೆದ ಸ್ಥಳದಲ್ಲಿ ನಾಯಿ ಸುತ್ತು ಹಾಕುತ್ತಿರುವುದು ಮತ್ತು ಮನೆ ಮಾಲಿಕರನ್ನು ಹುಡುಕುತ್ತಿರುವುದು ಕಂಡು ಬಂತು.
ನಿಯತ್ತಿನ ಪ್ರಾಣಿಯ ಮೂಕ ರೋಧನೆ ಸ್ಥಳದಲ್ಲಿ ನೆರದವರ ಮನ ಕಲಕುವಂತಿತ್ತು.
ಮೂವತ್ತೈದು/ನಲ್ವತ್ತು ವರ್ಷಗಳ ಹಿಂದೆ ಮಂಗಳೂರಿನ ಬಂಟ ವೈದ್ಯರೊಬ್ಬರು ಕಾಲವಾದ ಘಟನೆ ಹೆಚ್ಚು ಕಡಿಮೆ ಅವರ ಅಚ್ಚುಮೆಚ್ಚಿನ ಆಲ್ಸೇಷನ್ ನಾಯಿ ಅವರ ದಹನ ಕ್ರಿಯೆ ನಡೆದ ಸ್ಮಶಾನದಲ್ಲಿ ಅನ್ನ ನೀರು ಸೇವಿಸದೆ ಮಾಲೀಕರಿಗಾಗಿ ಪರಿತಪಿಸಿದ ಮನಕಲಕುವ ನೆನಪಿನ್ನೂ ಹಸಿರಾಗಿದೆ.ವೈದ್ಯರ ಮನೆಮಂದಿಯ ಶತಪ್ರಯತ್ನಗಳು ವಿಫಲವಾಗಿ,ಮತ್ತೊಬ್ಬ ವೈದ್ಯರ ಆಪ್ತ ಸ್ನೇಹಿತರು ಹರಸಾಹಸ ಪಟ್ಟು ಶತಮಾನದ ಮನ ಗೆದ್ದು ಜೀವ ಉಳಿಸುವಲ್ಲಿ ಸಾಫಲ್ಯ ಪಡೆದಿದ್ದರು.ಘಟನೆ ಆಗಿನ ಪತ್ರಿಕೆಗಳಲ್ಲಿ ಸಹ ಮುಂದಿನ ಪುಟಗಳಲ್ಲಿ ಪ್ರಸಾರ ಕಂಡಿತ್ತು.
ಘಟನೆ ಬಗ್ಗೆ ಉದಯವಾಣಿ ಶೀರ್ಷಿಕೆ :
” ಬಂದಾನೋ ಬಾರಾನೋ ನನ್ನೊಡೆಯ ”
ಸಕಾಲಿಕ ಟಿಪ್ಪಣಿ.
ಮೂವತ್ತೈದು/ನಲ್ವತ್ತು ವರ್ಷಗಳ ಹಿಂದೆ ಮಂಗಳೂರಿನ ಬಂಟ ವೈದ್ಯರೊಬ್ಬರು ಕಾಲವಾದ ಘಟನೆ ಹೆಚ್ಚು ಕಡಿಮೆ ಅವರ ಅಚ್ಚುಮೆಚ್ಚಿನ ಆಲ್ಸೇಷನ್ ನಾಯಿ ಅವರ ದಹನ ಕ್ರಿಯೆ ನಡೆದ ಸ್ಮಶಾನದಲ್ಲಿ ಅನ್ನ ನೀರು ಸೇವಿಸದೆ ಮಾಲೀಕರಿಗಾಗಿ ಪರಿತಪಿಸಿದ ಮನಕಲಕುವ ನೆನಪಿನ್ನೂ ಹಸಿರಾಗಿದೆ.ವೈದ್ಯರ ಮನೆಮಂದಿಯ ಶತಪ್ರಯತ್ನಗಳು ವಿಫಲವಾಗಿ,ಮತ್ತೊಬ್ಬ ವೈದ್ಯರ ಆಪ್ತ ಸ್ನೇಹಿತರು ಹರಸಾಹಸ ಪಟ್ಟು ಶ್ವಾನದ ಮನ ಗೆದ್ದು ಜೀವ ಉಳಿಸುವಲ್ಲಿ ಸಾಫಲ್ಯ ಪಡೆದಿದ್ದರು.ಘಟನೆ ಆಗಿನ ಪತ್ರಿಕೆಗಳಲ್ಲಿ ಸಹ ಮುಂದಿನ ಪುಟಗಳಲ್ಲಿ ಪ್ರಸಾರ ಕಂಡಿತ್ತು.
ಘಟನೆ ಬಗ್ಗೆ ಉದಯವಾಣಿ ಶೀರ್ಷಿಕೆ :
” ಬಂದಾನೋ ಬಾರಾನೋ ನನ್ನೊಡೆಯ ”
ಸಕಾಲಿಕ ಟಿಪ್ಪಣಿ.