ರಸ್ತೆಗೆ ಕುಸಿದ ಗುಡ್ಡ: ವಿಟ್ಲ- ಕಾಸರಗೋಡು ರಸ್ತೆ ಸಂಚಾರಕ್ಕೆ ತಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಬಿರುಸಾಗಿದ್ದು, ಮಂಗಳವಾರ ದಿಡೀರ್ ಗುಡ್ಡ ಕುಸಿತಗೊಂಡು ವಿಟ್ಲ ಕಾಸರಗೋಡು ಸಂಪರ್ಕ ರಸ್ತೆಯಲ್ಲಿ ಸಂಚಾರಕ್ಕೆ ತಡೆಯಾಗಿದೆ.
ಮಂಗಳವಾರ ಬೆಳಗ್ಗಿನಿಂದಲೇ ಈ ಭಾಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ನಾಗರಿಕರು ಸಂಕಷ್ಟ ಪಡುವಂತಾಗಿದ್ದು, ಪ್ರಯಾಣಿಕರು ಪರದಾಟ ನಡೆಸುತ್ತಿದ್ದಾರೆ.
ರಸ್ತೆಗೆ ಕುಸಿದಿರುವ ಗುಡ್ಡ ತೆರವು ಕಾರ್ಯ ಭರದಿಂದ ಸಾಗಿದೆ.
ಜಿಲ್ಲೆಯ ವಿವಿಧೆಡೆಗಳಲ್ಲಿಯೂ ಭೂಕುಸಿತ ಸಂಭವಿಸುತ್ತಿದೆ. ಜೀವ ನದಿಗಳು ಅಪಾಯದ ಮಟ್ಟ ಮುಟ್ಟುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!