ಹೊಸದಿಗಂತ ಡಿಜಿಟಲ್ ಡೆಸ್ಕ್:
ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ದೂದ್ ಸಾಗರ್ ಜಲಪಾತದ ಬಳಿ ಗುಡ್ಡ ಕುಸಿದಿದ್ದು, ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗಿದೆ.
ದೂದ್ ಸಾಗರ್ ಬಳಿ ರೈಲ್ವೆ ಹಳಿಯ ಸುರಂಗ ಮಾರ್ಗದ ಎದುರು ಈ ಘಟನೆ ಸಂಭವಿಸಿದೆ. ಬೃಹತ್ ಬಂಡೆ ಕುಸಿದ ಪರಿಣಾಮ 4 ಗಂಟೆಗಳ ಕಾಲ ಬೆಳಗಾವಿ-ಗೋವಾ ರೈಲ್ವೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.
ನಂತರ ಅಗ್ನಿಶಾಮಕ ಸಿಬ್ಬಂದಿ ಹಾಗೂ ರೈಲ್ವೆ ಪೊಲೀಸರು ಮಣ್ಣು, ಬಂಡೆ ತೆರವು ಮಾಡಿದರು. ನಂತರ ರೈಲುಗಳ ಸಂಚಾರ ಪುನಾರಂಭವಾಯಿತು.
ಮಳೆಗಾಲಯದಲ್ಲಿ ಅಪಾಯ ಹೆಚ್ಚಿರುವ ಹಿನ್ನೆಲೆ ದೂದ್ ಸಾಗರ್‌ಗೆ ತೆರಳದಂತೆ ಗೋವಾ ಸರ್ಕಾರ ಪ್ರವಾಸಿಗರಿಗೆ ಸೂಚನೆ ನೀಡಿದೆ. ಸದ್ಯ ಸ್ಥಳದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.