ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿ ಕ್ರಿಕೆಟ್ ಜಗತ್ತನ್ನು ನಿಬ್ಬೆರಗಾಗಿಸಿದ್ದ ರವಿಚಂದ್ರನ್ ಅಶ್ವಿನ್ ಇದೀಗ ಹಿಂದಿ ‘ನಮ್ಮ ರಾಷ್ಟ್ರ ಭಾಷೆಯಲ್ಲ, ಅಧಿಕೃತ ಭಾಷೆಯಷ್ಟೇ’ ಎಂದು ಹೇಳಿದ್ದಾರೆ.
ತಮಿಳುನಾಡಿನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅಶ್ವಿನ್, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳು ಇಂಗ್ಲಿಷ್ ಅಥವಾ ತಮಿಳಿನಲ್ಲಿ ಪ್ರಶ್ನೆಗಳನ್ನು ಕೇಳಲು ಸಾಧ್ಯವಾಗದಿದ್ದರೆ, ಹಿಂದಿಯಲ್ಲಿ ಪ್ರಶ್ನೆಗಳನ್ನು ಕೇಳಲು ಸಿದ್ಧರಿದ್ದಾರೆಯೇ ಎಂದು ಪ್ರಶ್ನಿಸಿದರು.
‘ಇಲ್ಲಿ ಇಂಗ್ಲಿಷ್ ವಿದ್ಯಾರ್ಥಿಗಳಿದ್ದರೆ ಯೇ ಎಂದು ಹೇಳಿ’ ಎನ್ನುತ್ತಾರೆ ಅದಕ್ಕೆ ಪ್ರತ್ಯುತ್ತರವಾಗಿ ವಿದ್ಯಾರ್ಥಿಗಳು ಯೇ ಎಂದು ಚೀರುತ್ತಾರೆ. ಬಳಿಕ ‘ತಮಿಳು’ ಎನ್ನುತ್ತಾರೆ. ಈ ಸಂದರ್ಭದಲ್ಲಿ, ವಿದ್ಯಾರ್ಥಿಗಳು ಘರ್ಜಿಸುತ್ತಾರೆ. ‘ಸರಿ, ಹಿಂದಿ?’ ಎಂದು ಪ್ರಶ್ನಿಸಿದ್ದಕ್ಕೆ ಪ್ರತಿಯಾಗಿ ಪ್ರೇಕ್ಷಕರು ಇದ್ದಕ್ಕಿದ್ದಂತೆ ಮೌನವಾಗುತ್ತಾರೆ. ಆಗ ಅಶ್ವಿನ್, ನಾನು ಇದನ್ನೇ ಹೇಳಬೇಕೆಂದು ನಾನು ಭಾವಿಸಿದೆ. ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ; ಇದು ಅಧಿಕೃತ ಭಾಷೆ’ ಎಂದು ಅಶ್ವಿನ್ ತಮಿಳಿನಲ್ಲಿ ಹೇಳಿದರು.
ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಸೇರಿದಂತೆ ಹಲವು ವಿರೋಧ ಪಕ್ಷಗಳು ಕೇಂದ್ರವು ರಾಜ್ಯಗಳ ಮೇಲೆ, ವಿಶೇಷವಾಗಿ ದಕ್ಷಿಣದಲ್ಲಿ ಹಿಂದಿಯನ್ನು ಹೇರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಸಮಯದಲ್ಲಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಈ ಹೇಳಿಕೆ ನೀಡಿರುವುದು ಹೊಸ ಚರ್ಚೆಯನ್ನು ಹುಟ್ಟುಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ.
ಹಾಗಿದ್ದರೆ ತಮಿಳು ರಾಷ್ಟ್ರಭಾಷೆ ಇರಬಹುದೇ.
ದುಡ್ಡಿನ ಮದ ತಲೆಗೇರಿದವರು ಮಾತನಾಡುವ ವರಸೆ ಹೀಗೇ ಇರುತ್ತದೆ.ಮೇಲಾಗಿ ತಮಿಳುನಾಡಿನ ಹಿಂದೂಗಳೆಲ್ಲಾ ದ್ರಾವಿಡತನ ತಲೆಗೇರಿಸಿಕೊಂಡವರು.ಆ ಕಡೆ ತಮಿಳುನಾಡು ಆಂಧ್ರಪ್ರದೇಶಗಳು ಮತಾಂತರಕ್ಕೂ ಪ್ರಸಿದ್ಧಿ.ಎಡೆಬಿಡಂಗಿಗಳು.