ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಕರಾಚಿ ಮುನ್ಸಿಪಲ್ ಕಾರ್ಪೊರೇಶನ್‌ನ ನಿವೃತ್ತ ನಿರ್ದೇಶಕ ಮತ್ತು ನೇತ್ರತಜ್ಞ ಡಾ ಬೀರ್ಬಲ್ ಗೆನಾನಿ ಅವರನ್ನು ಇಂದು ಲಿಯಾರಿ ಎಕ್ಸ್‌ಪ್ರೆಸ್‌ವೇ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ದಾಳಿಯಲ್ಲಿ ಅವರ ಸಹಾಯಕ ಡಾ.ಕುರಾತ್-ಉಲ್-ಐನ್ ಗಾಯಗೊಂಡಿದ್ದಾರೆ. ಇವರಿಬ್ಬರು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ದಾಳಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ಇದು ಉದ್ದೇಶಪೂರ್ವಕ ಹತ್ಯೆಯ ಪ್ರಕರಣ ಎಂದು ಶಂಕಿಸಲಾಗಿದೆ. ಈ ತಿಂಗಳಲ್ಲಿ ಪಾಕಿಸ್ತಾನದಲ್ಲಿ ಹಿಂದೂ ವೈದ್ಯರ ಮೇಲೆ ನಡೆದ ದಾಳಿಯ ಎರಡನೇ ಪ್ರಕರಣ ಇದಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಪಾಕಿಸ್ತಾನದ ಹೈದರಾಬಾದ್‌ನ ವೈದ್ಯ ಧರಮ್ ದೇವ್ ರಾಥಿ ಅವರನ್ನು ಅವರ ಡ್ರೈವರ್ ತನ್ನ ಮನೆಯೊಳಗೆ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಚಾಲಕ ಚಾಕುವಿನಿಂದ ವೈದ್ಯರ ಕತ್ತು ಸೀಳಿದ್ದಾಗಿ ಪೊಲೀಸರು ಪಾಕಿಸ್ತಾನಿ ಸುದ್ದಿವಾಹಿನಿ ದಿ ನೇಷನ್‌ಗೆ ತಿಳಿಸಿದ್ದಾರೆ.
ಪೊಲೀಸರು ಖೈರ್‌ಪುರದ ಮನೆಯಿಂದ ಚಾಲಕನನ್ನು ಬಂಧಿಸಿ ಆತನ ಹೆಸರು ಹನೀಫ್ ಲೆಘರಿ ಎಂದು ಗುರುತಿಸಿದ್ದಾರೆ.