Wednesday, February 28, 2024

ಬಿಹಾರದ ಶಾಲೆಗಳಲ್ಲಿ ಹಿಂದು ಹಬ್ಬಗಳ ರಜೆಗೆ ಕತ್ತರಿ, ಉರ್ದು ಶಾಲೆಗಳಿಗೆ ಶುಕ್ರವಾರ ರಜೆ ಕೊಟ್ಟು ಮುಸ್ಲಿಂ ತುಷ್ಟೀಕರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸರ್ಕಾರಿ ಶಾಲೆಗಳಲ್ಲಿ ಹಿಂದೂ ಹಬ್ಬಗಳ ರಜೆಯನ್ನು ಕಡಿತಗೊಳಿಸಿ ಮುಸ್ಲಿಂ ಹಬ್ಬಗಳಿಗೆ ಹೆಚ್ಚಿನ ರಜೆಯನ್ನು ನೀಡುವ ಮೂಲಕ ಬಿಹಾರದ ನಿತೀಶ್ ಕುಮಾರ್ ಸರ್ಕಾರ ವಿವಾದವನ್ನು ಹುಟ್ಟುಹಾಕಿದೆ.

ಬಿಹಾರ ಶಿಕ್ಷಣ ಇಲಾಖೆಯ 2024ರ ರಜಾದಿನದ ಕ್ಯಾಲೆಂಡರ್ ಅನ್ನು ಹಲವು ಮಾಧ್ಯಮಗಳು ವರದಿ ಮಾಡಿವೆ. ಕ್ಯಾಲೆಂಡರ್‌ನಲ್ಲಿ ಶಿಕ್ಷಣ ಹಕ್ಕು ಕಾಯಿದೆ (RTE) ಪ್ರಕಾರ 220 ದಿನಗಳ ಬೋಧನೆಯ ಅಗತ್ಯ ಮಾನದಂಡಗಳನ್ನು ಪೂರೈಸಲಾಗಿದೆ ಎಂದು ರಾಜ್ಯದ ಶಿಕ್ಷಣ ಇಲಾಖೆಯು ತನ್ನ ಪ್ರಕಟಣೆಯಲ್ಲಿ ಹೇಳಿಕೊಂಡಿದೆ.

ಬಿಹಾರದ ಶಾಲೆಗಳ ರಜಾ ಸಾರಾಂಶವನ್ನು ಒಂದೇ ಹೋಲಿಕೆಯಲ್ಲಿ ಹಿಡಿದಿಡುವುದಾದರೆ- ಒಟ್ಟೂ ಒಂಬತ್ತು ಹಿಂದು ಹಬ್ಬಗಳಿಗೆ ರಜೆ ದೊರಕಿದ್ದರೆ, ಮುಸ್ಲಿಂ ಹಬ್ಬಗಳಿಗೆ ಸಿಕ್ಕಿರುವ ರಜೆಗಳ ಸಂಖ್ಯೆ 11.

ಈ ಹಿಂದೆ ಇದ್ದಿದ್ದ, ಆದರೆ ಈಗ ಕೈಬಿಟ್ಟಿರುವ ಹಿಂದು ಹಬ್ಬದ ರಜೆಗಳೆಂದರೆ- ಮಕರ ಸಂಕ್ರಾಂತಿ, ರಕ್ಷಾಬಂಧನ, ಸರಸ್ವತಿ ಪೂಜೆ, ಜನ್ಮಾಷ್ಟಮಿ, ರಾಮ ನವಮಿ, ಭಾಯಿದೂಜ್ ಮತ್ತು ಶಿವರಾತ್ರಿ. ಹಿಂದು ಮಕ್ಕಳಿಗೆ ಸಿಕ್ಕಿರುವ 9 ರಜೆಗಳು ಹೀಗಿವೆ- ದೀಪಾವಳಿ (1), ದುರ್ಗಾಪೂಜೆ (3), ಛತ್‌ ಪೂಜೆ (3), ಹೋಳಿ (2).

ಮುಸ್ಲಿಂ ಹಬ್ಬಗಳಿಗೆ ರಜೆ ಹಂಚಿಕೆ ಹೀಗಿದೆ- ಶಾಬ್-ಎ-ಬರಾತ್ (1), ಈದ್-ಉಲ್-ಫಿತರ್(3), ಈದ್-ಉಲ್-ಜೋಹಾ(3), ಮೊಹರಂ(2), ಚೆಹಲ್ಲುಮ್ (1), ಪ್ರವಾದಿ ಜನ್ಮದಿನ (1).

ಹೊಸ ಕ್ಯಾಲೆಂಡರ್‌ ಅನುಸಾರ ಬೇಸಿಗೆಯ ರಜಾ ದಿನಗಳನ್ನು 20 ರಿಂದ 30 ಕ್ಕೆ ಹೆಚ್ಚಿಸಲಾಗಿದೆ.

ಮುಸ್ಲಿಂ ತುಷ್ಟೀಕರಣ ಎಂದು ಟೀಕೆಗೆ ಒಳಗಾಗುತ್ತಿರುವ ಇನ್ನೊಂದು ನಡೆ ಎಂದರೆ ಸರ್ಕಾರದ ವ್ಯಾಪ್ತಿಯಲ್ಲಿರುವ ಉರ್ದು ಶಾಲೆಗಳಿಗೆ ಗೆಜೆಟ್ ನಲ್ಲಿ ಸೂಚಿತವಾಗಿರುವ ಭಾನುವಾರದ ಬದಲು ಶುಕ್ರವಾರ ರಜೆ ನೀಡಿರುವುದು.

ಹಿಂದು ಹಬ್ಬಗಳಿಗೆ ರಜೆ ಕಡಿತಗೊಳಿಸಿ ಮುಸ್ಲಿಂ ಹಬ್ಬಗಳಿಗೆ ಹೆಚ್ಚಿಸಿರುವುದು ಬಿಹಾರದಲ್ಲಿ ನಿತೀಶ್ ಸರ್ಕಾರವು ಇಸ್ಲಾಮೀಕರಣ ನಡೆಸುತ್ತಿರುವುದು ಸೂಚನೆ ಎಂದು ಕೇಂದ್ರ ಸಚಿವ ಗಿರಿರಾಜ ಸಿಂಘ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!