ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದೊಂದಿಗೆ ಧಾರ್ಮಿಕ ಪ್ರವಾಸೋದ್ಯಮ ಆರಂಭಿಸಬೇಕು ಎಂದು ಪಾಕಿಸ್ತಾನ ಆಡಳಿತ ಪಕ್ಷದ ಪ್ರಮುಖ ಸದಸ್ಯರೊಬ್ಬರು ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಭಾರತಕ್ಕೆ ಸಲ್ಲಿಸುವ ಪ್ರಸ್ತಾವನೆಗೆ ಸರ್ಕಾರದ ಅನುಮೋದನೆಗಾಗಿ ಪಾಕಿಸ್ತಾನ ಸರ್ಕಾರ ಕಾಯುತ್ತಿದೆ. ಜ.29ರಂದು ಪಾಕಿಸ್ತಾನ ವಿಮಾನ ಸಂಸ್ಥೆಯ ವಿಶೇಷ ವಿಮಾನದ ಮೂಲಕ ಪಾಕಿಸ್ತಾನದ ಯಾತ್ರಾರ್ಥಿಗಳು ನಿಯೋಗ ಭಾರತಕ್ಕೆ ಬರಲಿದೆ ಎಂದು ನಿಯೋಗದ ನೇತೃತ್ವ ವಹಿಸಿರುವ ಪಾಕಿಸ್ತಾನ ಹಿಂದೂ ಪರಿಷತ್ತಿನ ಮುಖ್ಯಸ್ಥ ಮತ್ತು ರಾಷ್ಟ್ರ ಸಂಸತ್ತಿನ ಸದಸ್ಯ ಡಾ.ರಮೇಶ್ ಕುಮಾರ್ ವಂಕ್ವಾನಿ ತಿಳಿಸಿದ್ದಾರೆ.
ನಿಯೋಗದ ಮೂರು ದಿನದ ಭಾರತ ಪ್ರವಾಸದಲ್ಲಿ ಸದಸ್ಯರು ಆಗ್ರಾದ ತಾಜ್ ಮಹಲ್, ದೆಹಲಿಯ ನಿಜಾಮುದ್ದೀನ್ ಔಲಿಯಾ ದರ್ಗಾ ಹಾಗೂ ಅಜ್ಮೀರ್‌ನ ಖವಾಜ್ ಘರೀಬ್ ನವಾಜ್ ಗೆ ಭೇಟಿ ನೀಡಿಲಿದ್ದಾರೆ.
ಎರಡು ರಾಷ್ಟ್ರಗಳ ಜನರಲ್ಲಿ ಬಾಂಧವ್ಯ ಹೆಚ್ಚಿಸಲು ಈ ಧಾರ್ಮಿಕ ಪ್ರವಾಸೋದ್ಯಮ ಸಹಕಾರಿಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.