ಸ್ವಚ್ಛ, ಸುಂದರ ಸಮಾಜ ನಿರ್ಮಾಣಕ್ಕೆ ಹಿಂದೂ ಸಮಾಜ ಪಣ ತೊಡಬೇಕು: ನರೇಂದ್ರ

ಹೊಸದಿಗಂತ ವರದಿ, ಬಾಗಲಕೋಟೆ :

ಹಿಂದೂ ಸಮಾಜದಲ್ಲಿರುವ ಜಾತೀಯತೆ ಮರೆಯಾಗಿ, ಎಲ್ಲರೂ ಪರಸ್ಪರ ಸಮಾನತೆಯಿಂದ ಬದುಕುವ ವಾತಾವರಣ ನಿರ್ಮಾಣ ಆಗಬೇಕು ಇದು ಸಂಘದ ಆಶಾವಾಗಿದೆ ಎಂದು ಆರ್ ಎಸ್ ಎಸ್‌ ಕರ್ನಾಟಕ ಉತ್ತರ ಪ್ರಾಂತ ಪ್ರಚಾರಕ ನರೇಂದ್ರ ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಗರ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ನಡೆದ ಗಣವೇಷಧಾರಿಗಳ ಪಥಸಂಚಲನ ಬಳಿಕ ನಡೆದ‌ ಸಾರ್ವಜನಿಕ ಬಹಿರಂಗ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿರುವ ಎಲ್ಲರಿಗೂ ಸುಲಭವಾಗಿ ನೀರು, ಸ್ಮಶಾನ ಸಿಗಬೇಕು ಅಂದಾಗ ಸಮಾನತೆಯ ಸಾಕಾರಗೊಂಡಂತಗುತ್ತದೆ. ಸ್ವಚ್ಛ, ಸುಂದರ ಸಮಾಜ ನಿರ್ಮಾಣಕ್ಕೆ ಹಿಂದೂ ಸಮಾಜ ಪಣ ತೊಡಬೇಕಿದೆ ಎಂದರು.

ಸಮಾಜದ ಒಳಗೆ ಮತ್ತು ಹೊರಗಿನ ಶಕ್ತಿಗಳು ಸಮಾಜವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಯುತ್ತಿದೆ. ಯಾರು ಹಿಂದೂ ಸಮಾಜ ಒಡೆಯಲು ಪ್ರಯತ್ನ ಮಾಡಿದ್ದಾರೆ ಅವರೆಲ್ಲ ನಾಶವಾಗಿದ್ದರೆ ಎಂದು ಹೇಳಿದರು.
ನಿತ್ಯ ವಚನ ಪಠಣ ಮಾಡುತ್ತೇವೆ ಆದರೆ ವಚನದ ಸಾರವನ್ನು ನಮ್ಮ ಬದುಕಿನಲ್ಲಿ ಅನುಸರಿವುದಿಲ್ಲ, ಇದುವೇ ಜಾತಿಯತೆ ಜೀವಂತಿಕೆ ತೋರುತ್ತದೆ ಎಂದು ಹೇಳಿದರು.
ಜಗತ್ತಿನಲ್ಲಿ ಬೇರೆ ಬೇರೆ ರಾಷ್ಟ್ರಗಳ ಮೇಲೆ ದಾಳಿ ಆಗಿವೆ ಅನೇಕ ರಾಷ್ಟ್ರಗಳು ನಾಶ ಆಗಿವೆ. ಕೇಲವು ರಾಷ್ಟ್ರಗಳಂತೂ ಮೂಲ ಸಿದ್ಧಾಂತ ಮರೆತಿವೆ. ಅದಾದರೆ ಭಾರತ ಹಾಗಲ್ಲ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳು ಸಾಕಷ್ಟು ದಾಳಿ ಮಾಡಿದಾಗ ತನ್ನ ನಿರಂತರವಾದ ಹೋರಾಟದಿಂದ ತನ್ನ ಜೀವಂತಿಕೆ ಇಟ್ಟುಕೊಂಡು ಇಂದು ಜಗತ್ತು ತನ್ನತ್ತ ನೋಡುವಂತೆ ಬೆಳೆದು ನಿಂತಿದೆ ಇದು ಭಾರತದ ತಾಕತ್ತು ಎಂದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!