ಹೊಸದಿಗಂತ ಡಿಜಿಟಲ್ ಡೆಸ್ಕ್
ಮಂಗಳೂರು ತಾಲೂಕಿನ ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಳಲಿ ಪೇಟೆಯ (ಮಣೆಲ್) ಇತಿಹಾಸ ಪ್ರಸಿದ್ಧ ಅಸ್ಸಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾ ಶರೀಫ್ ಜುಮಾ ಮಸೀದಿಯ ಒಳಭಾಗದಲ್ಲಿ ದೇವಸ್ಥಾನದ ಗರ್ಭಗುಡಿ ಇರುವುದು ಬೆಳಕಿಗೆ ಬಂದಿದೆ.
ಇತ್ತೀಚೆಗೆ ಮಸೀದಿಯ ಕೆಲವು ಭಾಗಗಳನ್ನು ನವೀಕರಣದ ಸಲುವಾಗಿ ಕೆಡವಿದಾಗ ದೇವಸ್ಥಾನ ಇರುವಿಕೆಯು ಬಹಿರಂಗವಾಗಿತ್ತು.
ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾಗುತ್ತಿದಂತೆ ಹಿಂದು ಸಂಘಟನೆಗಳ ಮುಖಂಡರುಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಮಂಗಳೂರು ತಹಸೀಲ್ದಾರ್ ಪುರಂದರ ಹೆಗ್ಡೆ ಮತ್ತು ಅಧಿಕಾರಿಗಳು ಮತ್ತು ಬಜಪೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿ ಎರಡೂ ಧರ್ಮದ ಮುಖಂಡರುಗಳ ಜತೆ ಚರ್ಚಿಸಿ ಪರಿಸ್ಥಿತಿ ಬೀಗಡಾಯಿಸದಂತೆ ಕ್ರಮ ಕೈಗೊಂಡರು ಹಾಗೂ ಮಸೀದಿಯ ದಾಖಲೆಗಳನ್ನು ಪರಿಶೀಲಿಸಿ ತಾತ್ಕಾಲಿಕವಾಗಿ ನವೀಕರಣ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ. ಒಳಗಡೆ ಹಿಂದು ದೇವಸ್ಥಾನದಲ್ಲಿ ಕಂಡು ಬರುವ ಕೆತ್ತನೆ, ಕಲಷ, ತೋಮರ, ಕುಸುರಿ ಕೆತ್ತನೆಯ ಕಂಬಗಳು, ಮಧ್ಯೆ ಎತ್ತರದ ಗರ್ಭಗುಡಿಯಂತಿರುವ ಜಾಗವಿದ್ದು ಮೇಲಕ್ಕೆ ನಾಲ್ಕೈದು ಮೆಟ್ಟಿಲುಗಳಿವೆ ಅಲ್ಲಿ ಒಂದು ಪೀಠದ ರಚನೆ ಇದೆ.