ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆನಡಾದ ಹಿಂದು ಸಭಾ ಮಂದಿರದ ಮೇಲೆ ಖಲಿಸ್ತಾನಿ ದಾಳಿ ನಡೆಸಿದೆ. ಕೆನಡಾ ಸಂಸದ ಚಂದ್ರ ಆರ್ಯ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅದರಲ್ಲಿ ಖಲಿಸ್ತಾನಿ ಉಗ್ರಗಾಮಿಗಳು ಬ್ರಾಂಪ್ಟನ್‌ನಲ್ಲಿರುವ ಹಿಂದು ಸಭಾ ದೇವಾಲಯದ ಮೈದಾನದಲ್ಲಿ ಹಿಂದು
ಭಕ್ತರ ಮೇಲೆ ದಾಳಿ ನಡೆಸಿರುವುದು ಕಂಡುಬಂದಿದೆ. ಕೆನಡಾದ ಸಂಸದರು ಹಿಂಸಾಚಾರವನ್ನು ಖಂಡಿಸಿದರು ಮತ್ತು ಖಲಿಸ್ತಾನಿ ಉಗ್ರಗಾಮಿಗಳು ಕೆಂಪು ರೇಖೆಯನ್ನು ದಾಟಿದ್ದಾರೆ ಎಂದು ಹೇಳಿದ್ದಾರೆ.
ಕೆನಡಾದ ಖಲಿಸ್ತಾನಿ ಉಗ್ರರು ಇಂದು ಕೆಂಪು ಗೆರೆಯನ್ನು ದಾಟಿದ್ದಾರೆ. ಬ್ರಾಂಪ್ಟನ್‌ನ ಹಿಂದು
ಸಭಾ ದೇವಾಲಯದ ಮೈದಾನದಲ್ಲಿ ಕೆನಡಾದ ಪ್ರಜೆಗಳ ಮೇಲೆ ಖಲಿಸ್ತಾನಿ ಹಿಂಸಾತ್ಮಕ ಉಗ್ರಗಾಮಿತ್ವವು ಎಷ್ಟು ಲಜ್ಜೆಗೆಟ್ಟಿದೆ ಎಂಬುದನ್ನು ತೋರಿಸುತ್ತದೆ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಸದ್ಯ ಈ ವಿಡಿಯೋ ಇದೀಗ ಸಾಕಷ್ಟು ವೈರಲ್ ಆಗುತ್ತಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
A red line has been crossed by Canadian Khalistani extremists today.
The attack by Khalistanis on the Hindu-Canadian devotees inside the premises of the Hindu Sabha temple in Brampton shows how deep and brazen has Khalistani violent extremism has become in Canada.
I begin to feel… pic.twitter.com/vPDdk9oble— Chandra Arya (@AryaCanada) November 3, 2024