UAEಯ ಹಿಂದು ದೇವಾಲಯ ಸಾರ್ವಜನಿಕರ ದರುಶನಕ್ಕೆ ಮುಕ್ತ: ಇಲ್ಲಿದೆ ಡ್ರೆಸ್‌ ಕೋಡ್‌, ಟೈಮಿಂಗ್ಸ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫೆಬ್ರವರಿ 14 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟಿಸಿದ UAEಯ ಮೊದಲ ಹಿಂದು ದೇವಾಲಯ ಶುಕ್ರವಾರ ಭಕ್ತರು ಮತ್ತು ಸಾರ್ವಜನಿಕರಿಗೆ ದರುಶನಕ್ಕೆ ತೆರೆಯಲಾಗಿದೆ.

ಇದೀಗ ಭಕ್ತರಿಗೆ ಡ್ರೆಸ್‌ ಕೋಡ್‌ (Dress Code) ಮಾಡಲಾಗಿದ್ದು, ದರುಶನಕ್ಕೆ ಸಮಯ ಕೂಡ ನಿಗದಿಪಡಿಸಲಾಗಿದೆ.

ಈ ಸಂಬಂಧ BAPS ಹಿಂದು ಮಂದಿರದ ಎಕ್ಸ್‌ ಖಾತೆಯಲ್ಲಿ ವಿವರ ನೀಡಲಾಗಿದೆ. ಅಬುಧಾಬಿ ಮಂದಿರ ಈಗ ಸಾರ್ವಜನಿಕರ ದರ್ಶನಕ್ಕೆ ತೆರೆದಿರುತ್ತದೆ ಎಂಬ ಪೋಸ್ಟ್‌ ಜೊತೆಗೆ ಭವ್ಯ ದೇಗುಲದ ಅದ್ಭುತ ವೀಡಿಯೋವನ್ನು ಸಹ ಹಂಚಿಕೊಂಡಿದೆ.

ಸೋಮವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ದೇವಾಲಯವು ಬೆಳಗ್ಗೆ 9 ರಿಂದ ರಾತ್ರಿ 8 ರವರೆಗೆ ತೆರೆದಿರುತ್ತದೆ ಎಂದು ಪೋಸ್ಟ್ ನಲ್ಲಿ ಉಲ್ಲೇಖಿಸಲಾಗಿದೆ.

ಅಬುಧಾಬಿ ದೇವಸ್ಥಾನಕ್ಕೆ (Abu Dhabi Hindu Temple) ಭೇಟಿ ನೀಡಲು ಡ್ರೆಸ್ ಕೋಡ್ ಮಾಡಲಾಗಿದೆ. ದೇವಾಲಯದ ವೆಬ್‌ಸೈಟ್‌ನಲ್ಲಿ ಭಕ್ತರು ಯಾವ ರೀತಿಯ ಬಟ್ಟೆಗೆ ಆದ್ಯತೆ ನೀಡಬೇಕು ಮತ್ತು ಯಾವುದನ್ನು ನಿಷೇಧಿಸಲಾಗಿದೆ. ಹಾಗೆಯೇ ಫೋಟೋಗ್ರಫಿ ನಿಯಮಗಳು ಇತ್ಯಾದಿಗಳ ಬಗ್ಗೆ ಸವಿವರವಾಗಿ ಉಲ್ಲೇಖಿಸಲಾಗಿದೆ.

 

ಡ್ರೆಸ್‌ ಕೋಡ್‌ ಏನು..?
* ಭಕ್ತರು ಕುತ್ತಿಗೆ, ಮೊಣಕೈ ಮತ್ತು ಮೊಣಕಾಲುಗಳು ಕಾಣುವಂತೆ ಬಟ್ಟೆ ಧರಿಸಬಾರದು.
* ಕ್ಯಾಪ್ಸ್, ಟೀ ಶರ್ಟ್‌ಗಳು ಮತ್ತು ಆಕ್ಷೇಪಾರ್ಹ ವಿನ್ಯಾಸಗಳನ್ನು ಹೊಂದಿರುವ ಇತರ ಉಡುಪುಗಳನ್ನು ಅನುಮತಿಸಲಾಗುವುದಿಲ್ಲ.
* ಅರೆಬರೆ ಬಟ್ಟೆ ಅಥವಾ ಬಿಗಿಯಾದ ಬಟ್ಟೆಗಳಿಗೆ ಅವಕಾಶ ಇಲ್ಲ.
* ತಬ್ಬಿಬ್ಬುಗೊಳಿಸುವ ಶಬ್ದಗಳು ಹಾಗೂ ಶೈನಿಂಗ್‌ ಬಟ್ಟೆಗಳಿಗೂ ನಿಷೇಧ.

ಈ ಮಾರ್ಗಸೂಚಿಗಳನ್ನು ಅನುಸರಿಸದ ಅಥವಾ ನಮ್ಮ ಸಿಬ್ಬಂದಿಯಿಂದ ಸೂಕ್ತವಲ್ಲವೆಂದು ಪರಿಗಣಿಸಲ್ಪಟ್ಟಿರುವ ಭಕ್ತರಿಗೆ ದೇಗುಲದೊಳಗೆ ಪ್ರವೇಶವನ್ನು ನಿರಾಕರಿಸಲಾಗುವುದು. ಒಟ್ಟಿನಲ್ಲಿ ಪ್ರಶಾಂತ ವಾತಾವರಣವನ್ನು ಕಾಪಾಡಲು ಮತ್ತು ನಮ್ಮ ಆವರಣದ ಕ್ರಮಬದ್ಧ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಈ ಮಾರ್ಗಸೂಚಿಗಳನ್ನು ಅನುಸರಿಸುವುದು ಅವಶ್ಯಕ ಎಂದು ದೇವಸ್ಥಾನದ ಅಧಿಕಾರಿಗಳು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!