Wednesday, February 8, 2023

Latest Posts

ಪಾಕಿಸ್ತಾನದಲ್ಲಿ ಹಿಂದೂ ಮಹಿಳೆ ಮೇಲೆ ಗ್ಯಾಂಗ್‌ ರೇಪ್:‌ ತಲೆ- ಸ್ತನ ಕತ್ತರಿಸಿ ಕೊಂದ ಪಾಪಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಯಾನಕ ಘಟನೆಯೊಂದರಲ್ಲಿ, ಪಾಕಿಸ್ತಾನದ ಸಿಂಧ್‌ನಲ್ಲಿ ಪಾಪಿಗಳು ಹಿಂದೂ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ನಂತರ ಬರ್ಬರವಾಗಿ ಕೊಂದಿದ್ದಾರೆ.
ಅಲ್ಲಿನ ಅಲ್ಪಸಂಖಾತ್ಯ ಭಿಲ್‌ ಸಮುದಾಯಕ್ಕೆ ಸೇರಿದ  ದಿಯಾ ಭೀಲ್ ಬಲಿಯಾದ ಮಹಿಳೆ. ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಆಕೆಯ ತಲೆ ಮತ್ತು ಸ್ತನಗಳನ್ನು ಕತ್ತರಿಸಿ ಕೊಲ್ಲಲಾಗಿದೆ. ಆರೋಪಿಗಳು ಆಕೆಯ ತಲೆ ಕತ್ತರಿಸಿ, ಚರ್ಮವನ್ನು ಸುಲಿದು ಗೋಧಿ ಹೊಲದಲ್ಲಿ ಎಸೆದು ಹೋಗಿದ್ದಾರೆ. ಪಾಕಿಸ್ತಾನದ ಸಂಘರ್ ಜಿಲ್ಲೆಯ ಸಿಂಧ್ ಪ್ರಾಂತ್ಯದಲ್ಲಿ ಘಟನೆ ನಡೆದಿದೆ. ಮಾಧ್ಯಮ ವರದಿಗಳ ಪ್ರಕಾರ, ಇನ್ನೂ ಯಾವುದೇ ಪ್ರಕರಣವನ್ನು ದಾಖಲಿಸಲಾಗಿಲ್ಲ. ಜತೆಗೆ ಆರೋಪಿಗಳನ್ನಾಗಿ ಯಾರನ್ನೂ ಗುರುತಿಸಲಾಗಿಲ್ಲ.

ಹಿಂದೂ ಮಹಿಳೆಯರ ಮೇಲಿನ ದೌರ್ಜನ್ಯ ಉಲ್ಬಣ
ಪಾಕಿಸ್ತಾನದಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಕುಟುಂಬಗಳ ಬಲವಂತದ ಮತಾಂತರ ಮತ್ತು ವಿವಾಹಗಳ ಪ್ರಕರಣಗಳ ಉಲ್ಬಣವು ತೀವ್ರ ಮಟ್ಟವನ್ನು ಮುಟ್ಟಿದೆ ಎಂದು ಇಂಟರ್ನ್ಯಾಷನಲ್ ಫೋರಂ ಫಾರ್ ರೈಟ್ಸ್ ಅಂಡ್ ಸೊಸೈಟಿ (IFFRAS) ವರದಿ ಮಾಡಿದೆ.
ಸಿಂಧ್‌ ಪ್ರಾಮತ್ರ್ಯವೊಂದರಲ್ಲೇ ವರ್ಷಕ್ಕೆ 1000 ಹಿಂದೂ ಹೆಣ್ಣುಮಕ್ಕಳ ಅಪಹರಣ, ಅತ್ಯಾಚಾರವಾಗುತ್ತದೆ ಎಂದು ವರದಿಗಳು ಹೇಳುತ್ತವೆ. 2019 ಮತ್ತು 2022 ರ ನಡುವೆ ಕ್ರಿಶ್ಚಿಯನ್ ಹುಡುಗಿಯರ ಅಪಹರಣ, ಅತ್ಯಾಚಾರ ಮತ್ತು ಬಲವಂತದ ಇಸ್ಲಾಂಗೆ ಮತಾಂತರದ ನೂರು ಪ್ರಕರಣಗಳು ಅಧಿಕೃತವಾಗಿ ದಾಖಲಾಗಿವೆ. ಹಿಂದೂ ಮತ್ತು ಸಿಖ್ ಹುಡುಗಿಯರನ್ನು ಮತಾಂತರ ಮಾಡುವ ವರದಿಗಳು ಬಹುತೇಕ ಪ್ರತಿ ತಿಂಗಳು ವರದಿಯಾಗುತ್ತದೆ.

13 ವರ್ಷದ ಬಾಲಕಿ ಅಪಹರಣ:
ಇತ್ತೀಚೆಗೆ, 13 ವರ್ಷದ ಅಪ್ರಾಪ್ತ ಹಿಂದೂ ಹುಡುಗಿಯನ್ನು ಸಿಂಧ್‌ನ ಕರಾಚಿಯಿಂದ ಅರ್ಷದ್ ಅಲಿ ಎಂಬ ವ್ಯಕ್ತಿ ತನ್ನ ಮನೆಯಿಂದ ಅಪಹರಿಸಿದ್ದ. ಕರಾಚಿ ಪೊಲೀಸರಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ, ಆದರೆ ಘಟನೆಯಲ್ಲಿ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಅಪ್ರಾಪ್ತ ಬಾಲಕಿಯ ಕುಟುಂಬದವರ ಪ್ರಕಾರ, ಅರ್ಷದ್ ಅಲಿ ಕಳೆದ ಒಂದೂವರೆ ವರ್ಷದಿಂದ ಕಿರುಕುಳ ನೀಡುತ್ತಿದ್ದು, ಹಲವು ಬಾರಿ ಪೊಲೀಸರಿಗೆ ದೂರು ನೀಡಿದ್ದರು. ಹುಡುಗಿಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ ಅರ್ಷದ್ ಅಲಿಯೊಂದಿಗೆ ಮದುವೆ ಮಾಡಲಾಗುರತ್ತದೆ ಎಂದು ಕುಟುಂಬವು ಆತಂಕದಲ್ಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!