ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ರೈಲಿನಲ್ಲಿ ಸುಳ್ಯದ ಹಿಂದು ಯುವಕನಿಗೆ ಅದೇ ರೈಲಿನಲ್ಲಿ ಬಂದ ಅನ್ಯ ಧರ್ಮದ ನಾಲ್ವರು ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ಹಲ್ಲೆ ನಡೆಸಿ ಪರಾರಿಯಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ತಕ್ಷಣ ಎಚ್ಚೆತ್ತ ಪುತ್ತೂರು ಪೊಲೀಸರು ಹಲ್ಲೆ ನಡೆಸಿ ಪರಾರಿಯಾದ ನಾಲ್ವರನ್ನು ಸಾಲ್ಮರ ಮಸೀದಿ ಬಳಿಯಿಂದ ವಶಕ್ಕೆ ಪಡೆದು ಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಿನಿಂದ ಪುತ್ತೂರು ಆಗಿ ಮಂಗಳೂರು ಕಡೆ ಹೋಗುವ ರೈಲಿನಲ್ಲಿ ಕೆಲ ಮಂದಿ ಗಲಾಟೆ ಮಾಡುತ್ತಿರುವುದನ್ನು ಯುವಕನೊಬ್ಬ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ರೈಲ್ವೆ ಪೊಲೀಸರು ಗಲಾಟೆ ಮಾಡಿ ಇತರ ಪ್ರಯಾಣಿಕರಿಗೆ ತೊಂದರೆ ಕೊಡುತ್ತಿದ್ದ ನಾಲ್ವರಿಗೆ ಎಚ್ಚರಿಕೆ ನೀಡಿದ್ದರು. ಆದರೆ ರೈಲ್ವೆ ಪೊಲೀಸರಿಗೆ ದೂರು ನೀಡಿದ ವ್ಯಕ್ತಿಯನ್ನು ಗುರಿಯಿಟ್ಟು ರೈಲು ಕಬಕ ಪುತ್ತೂರು ನಿಲ್ದಾಣಕ್ಕೆ ಬಂದ ತಕ್ಷಣ ನಾಲ್ವರು ತಮ್ಮ ಮೇಲೆ ದೂರು ನೀಡಿದ ವ್ಯಕ್ತಿಗೆ ಹಿಗ್ಗಾಮುಗ್ಗ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಈ ಕುರಿತು ಪುತ್ತೂರು ನಗರ ಠಾಣಾ ಪೊಲೀಸರಿಗೆ ಬಂದ ಮಾಹಿತಿಯಂತೆ ಪರಾರಿಯಾದ ನಾಲ್ವರನ್ನು ಸಾಲ್ಮರ ಮಸೀದಿಯ ಬಳಿಯಿಂದ ವಶಕ್ಕೆ ಪಡೆದುಕೊಂಡಿದ್ದಾರೆ. ಹಲ್ಲೆ ನಡೆಸಿದ ನಾಲ್ವರು ಪುತ್ತೂರಿನವರೆಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.