ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುಜಿಸಿ ನಿರ್ಧಾರಗಳ ವಿಚಾರವಾಗಿ ಕೇಂದ್ರ ಸರ್ಕಾರವನ್ನು ಸ್ಯಾಂಡಲ್‌ವುಡ್ ನಟ ಕಿಶೋರ್ ಟೀಕಿಸಿದ್ದಾರೆ.
ಯುಜಿಸಿಯಲ್ಲಿ ಕೇಂದ್ರ ತರಲಿರುವ ಹೊಸ ಬದಲಾವಣೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗಿತ್ತು. ಕೊನೆಗೆ ಸುಪ್ರೀಂ ಕೋರ್ಟ್ ಹೊಸ ನಿಯಮಗಳಿಗೆ ತಡೆ ನೀಡಿತ್ತು.
ಈ ಬಗ್ಗೆ ಇನ್ಸ್‌ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಕಿಶೋರ್, ‘ಹಿಂದು ಹಿಂದಕ್ಕೆ ಜಾತಿ ಮುಂದಕ್ಕೆ. ಇದ್ದ ಕಾನೂನನ್ನೇ ಅರೆಬರೆ ತಿರುಚಿ ಓಬಿಸಿ ಓಟಿಗೆ ಕೈಹಾಕಿ, ಮೇಲ್ಜಾತಿಯ ಕಿಚ್ಚೆಬ್ಬಿಸಿ, ರೈತ ಹೋರಾಟದಲ್ಲಿ ವರ್ಷಗಟ್ಟಲೆ ತೆಪ್ಪಗೆ ಮಲಗಿದ್ದ ಸುಪ್ರೀಂಕೋರ್ಟನ್ನು ಮೂರೇ ದಿನದಲ್ಲೆಬ್ಬಿಸಿ ಅರೆಬರೆ ಕಾನೂನನ್ನೂ ಇಲ್ಲವಾಗಿಸಿ ಸುಪ್ರೀಂ ಮೂತಿಗೆ ಎಂಜಲು ಬಳಿದು ಮೊಸರು ತಿನ್ನುವ ಕುತಂತ್ರಿ ಬಿಜೆಪಿ ಆರೆಸ್ಸೆಸ್ ನ ಬಣ್ಣ ಬಯಲು. ಈ ಭಾರತದಲ್ಲಿ ಹಿಂದು ಎಲ್ಲಿ? ಏಕ್ ಹೈ ತೊ ಸೇಫ್ ಹೈ. ಕಾಟೇಂಗೆ ತೊ ಬಾಟೇಂಗೆ ಹಿಂದೂ ಖತರೇ ಮೆ ಎಲ್ಲ ಬರೀ ರಾಜಕೀಯದ ಸುಳ್ಳು ದಾಳಗಳು. ಒಟ್ಟಿನಲ್ಲಿ ಹಿಂದು ಎನ್ನುವುದೇ ಇಲ್ಲಿಲ್ಲ. ಭಾರತದ ಸತ್ಯ ಬರೀ ಜಾತಿಯಷ್ಟೆ ಎಂದು ಬರೆದುಕೊಂಡಿದ್ದಾರೆ.
ತಾರತಮ್ಯದ ವಿರುದ್ಧ ಏನೂ ಮಾಡದೆಂದು ಅದರ ತಂತ್ರ ನೋಡಿದರೇ ಗೊತ್ತಾಗುವ ಒಂದು ಕಾನೂನಿನ ವಿರುದ್ಧ ಭುಗಿಲೇಳುತ್ತದೆಂದರೆ! ಇಲ್ಲಿ ಹಿಂದು ರಾಷ್ಟ್ರವಿರಲಿ.. ಹಿಂದುವೂ ಇಲ್ಲ ರಾಷ್ಟ್ರವೂ ಇಲ್ಲ ಇರುವುದು ಬರೀ ಜಾತಿ, ಜಾತೀವಾದ ಮತ್ತು ಜಾತ್ಯಾಂಧತೆಯಷ್ಟೆ ಎಂದು ಬರೆದಿದ್ದಾರೆ.



