ಧಮ೯ ಸಂಕಷ್ಟಕ್ಕೆ ಸಿಲುಕಿದಾಗ ಹಿಂದು ಜಾಗೃತನಾಗಬೇಕು: ಗೋಪಾಲ್ ಜೀ

ಹೊಸದಿಗಂತ ವರದಿ, ಕಲಬುರಗಿ:

ಸಮಾಜದಲ್ಲಿ ಸಾಮರಸ್ಯ ಮೂಡಬೇಕಾದರೆ ನಮ್ಮಲ್ಲಿನ ಅಜ್ಞಾನದ ಕತ್ತಲೆಯನ್ನು ಅಳಿದು ಜ್ಞಾನದ ದೀಪ ಪ್ರತಿಯೊಬ್ಬರಲ್ಲಿಯೂ ಪ್ರಜ್ವಲಿಸುವಂತಾಗಬೇಕು ಎಂದು ವಿಶ್ವಹಿಂದು ಪರಿಷತ್‍ನ ಕೇಂದ್ರಿಯ ಸಹ ಕಾರ್ಯದರ್ಶಿ ಗೋಪಾಲಜೀ ಹೇಳಿದರು.

ಪಟ್ಟಣದ ಮಾತೃಛಾಯಾ ಪ್ರೌಢ ಶಾಲಾ ಆವರಣದಲ್ಲಿ ವಿಶ್ವ ಹಿಂದು ಪರಿಷತ್ಶು ಶುಕ್ರವಾರ ಆಯೋಜಿಸಿದ್ದ 7ನೇ ವರ್ಷದ ಸಾಮೂಹಿಕ ದೀಪಲಕ್ಷ್ಮೀ ಪೂಜಾ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಭಾಗವಹಿಸಿದ ಅವರು ಮಾತನಾಡಿದರು.

ಧರ್ಮ ಸಂಕಷ್ಟದಲ್ಲಿದ್ದಾಗ ಹಿಂದು ಜಾಗೃತನಾಗುವುದು ಅವಶ್ಯವಾಗದೆ. ಶಾಂತಿ ಪ್ರೀಯರಾದ ನಾವು ಸಂದರ್ಭ ಬಂದಲ್ಲಿ ಪರಾಕ್ರಮಿಗಳಾಗಬೇಕು.ಹಿಂದು ಯುವತಿಯರನ್ನು ಸೆಳೆಯುವ ಹುನ್ನಾರ ವ್ಯವಸ್ಥಿತವಾಗಿ ರೂಪಿಸಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಕೆಲಸ ಮಾಡುವದು ಸಹ ಅಷ್ಟೆ ಅಗತ್ಯವಾಗಿದೆ. ಜೊತೆಗೆ ನಮ್ಮ ಆರಾಧ್ಯ ದೈವ ಗೋವುಗಳ ರಕ್ಷಣೆಯೂ ಆಗಬೇಕಾಗಿದೆ. ಅದು ನಮ್ಮ ಜವಾಬ್ದಾರಿಯು ಆಗಿದೆ. ಇದಕ್ಕೆ ಕಂಕಣ ಬದ್ಧರಾಗಬೇಕಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!