ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಶಾನ್ಯ ಕಾಂಗೋದಲ್ಲಿ ಯೋಧನೊಬ್ಬ ಸಿಟ್ಟಿನಿಂದ ಗುಂಡಿನ ದಾಳಿ ನಡೆಸಿದ್ದು, 13 ಮಂದಿ ಮೃತಪಟ್ಟಿದ್ದಾರೆ. ತಮ್ಮ ಮಗ ಮೃತಪಟ್ಟಿದ್ದು, ತಾವು ಬರುವ ಮುನ್ನವೇ ಮಗನ ಮೃತದೇಹವನ್ನು ಕುಟುಂಬದವರು ಸಮಾಧಿ ಮಾಡಿದ್ದಾರೆ.
ಇದರಿಂದ ಕೋಪಗೊಂಡ ಯೋಧ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು 13 ಮಂದಿಯನ್ನು ಕೊಂದಿದ್ದಾರೆ. ಇದರಲ್ಲಿ ಪತ್ನಿ, ಅತ್ತೆ ಮಾವ ಹಾಗೂ ಮಕ್ಕಳೂ ಇದ್ದಾರೆ, ಇನ್ನು ಅಂತ್ಯಕ್ರಿಯೆಗೆ ಬಂದಿದ್ದವರ ಮೇಲೆಯೂ ಗುಂಡು ಹಾರಿಸಿದ್ದಾರೆ. ತಕ್ಷಣ ಸ್ಥಳದಿಂದ ಹೊರಟುಹೋಗಿದ್ದಾರೆ. ಇದೀಗ ಅವರನ್ನು ಬಂಧಿಸಲು ಹುಡುಕಾಟ ನಡೆಯುತ್ತಿದೆ.